ಚೆನ್ನೈ: ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲಾ ವಿಭಾಗಳಲ್ಲಿಯೂ ಸರ್ವಾಂಗೀಣ ಹಾಗೂ ಸಂಘಟಿತ ಪ್ರದರ್ಶನದ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ನಲ್ಲಿ ಎರಡನೇ ಜಯ ದಾಖಲಿಸಿದೆ. 50 ರನ್ಗಳ ಗೆಲುವು ದಾಖಲಿಸಿದ ಆರ್ಸಿಬಿ ಚೆನ್ನೈನಲ್ಲಿ 17 ವರ್ಷದ ಸೋಲಿನ ಸರಣಿಯನ್ನು ಕಳಚಿದರು. ಮೊದಲು ಬ್ಯಾಟ್ ಮಾಡಿದ
ಆರ್ಸಿಬಿ 20 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 196ರನ್ ಕಲೆ ಹಾಕಿತು.ಗುರಿ ಬೆನ್ನಟ್ಟಿದ ಚೆನ್ನೈ20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿ ಸೋಲೊಪ್ಪಿಕೊಂಡಿತು.ಸಿಎಸ್ಕೆ ಪರ ರಚಿನ್ ರವೀಂದ್ರ 41 ರನ್ ಗಳಿಸಿದರು. ಮಹೇಂದ್ರ ಸಿಂಗ್ ಧೋನಿ 16 ಎಸೆತಗಳಲ್ಲಿ 30 ರನ್ ಗಳಿಸಿದರು. ಆರ್ಸಿಬಿ ಪರ ಜೋಶ್ ಹ್ಯಾಜಲ್ವುಡ್ 3 ವಿಕೆಟ್ ಪಡೆದರು, ಯಶ್ ದಯಾಳ್ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ ತಲಾ ಎರಡು ವಿಕೆಟ್ಪಡೆದರು.
ಇದಕ್ಕೂ ಮೊದಲು ಫಿಲಿಪ್ ಸಾಲ್ಟ್ ಅವರ ಅಬ್ಬರ ಆರಂಭ (16 ಎಸೆತಗಳಲ್ಲಿ 32 ರನ್), ನಾಯಕ ರಜತ್ ಪಾಟಿದಾರ್ ಅವರ ಉಪಯುಕ್ತ ಅರ್ಧಶತಕದ ನೆರವಿನಿಂದ (51 ರನ್: ಎ: 32; 3 ಸಿಕ್ಸರ್, ನಾಲ್ಕು ಬೌಂಡರಿ) ಆರ್ಸಿಬಿ ಉತ್ತಮ ಮೊತ್ತ ಗಳಿಸಿತು. 30 ಎಸೆತಗಳಲ್ಲಿ 31 ರನ್ ಕಲೆ ಹಾಕಿದ ಕೊಹ್ಲಿ, 14 ಎಸೆತಗಳಲ್ಲಿ 27 ರನ್ ಬಾರಿಸಿದ ದೇವದತ್ತ ಪಡಿಕಲ್, ಅಂತಿಮವಾಗಿ 8 ಎಸೆತಗಳಲ್ಲಿ ಮೂರು ಸಿಕ್ಸರ್ಗಳೊಂದಿಗೆ 22 ರನ್ ಕಲೆಹಾಕಿದ ಟಿಮ್ ಡೇವಿಡ್ ತಂಡಕ್ಕೆ ಉತ್ತಮ ಮೊತ್ತ ಪೇರಿಸುವಲ್ಲಿ ನೆರವಾದರು.ಉಳಿದಂತೆ ಲಿಯಾಮ್ ಲಿವಿಂಗ್ಸ್ಟಾನ್ (10), ಜಿತೇಶ್ ಶರ್ಮಾ (12) ತಮ್ಮ ಕೊಡುಗೆ ನೀಡಿದರು. ಚೆನ್ನೈ ಪರ ಸ್ಪಿನ್ನರ್ ನೂರ್ ಅಹ್ಮದ್ 36 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು. ವೇಗಿ ಮತೀಶಾ ಪತಿರಾಣಾ ಅವರು 36 ರನ್ ನೀಡಿ 2 ವಿಕೆಟ್ ಪಡೆದರು. ಆರ್. ರವಿಚಂದ್ರನ್ ಅಶ್ವಿನ್ ಹಾಗೂ ಖಲೀಲ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದು,
ಚೆಪಾಕ್ ಕ್ರೀಡಾಂಗಣದಲ್ಲಿ ಕಳೆದ 17 ವರ್ಷಗಳಿಂದ ಆರ್ಸಿಬಿ ಒಂದೂ ಪಂದ್ಯವನ್ನು ಗೆದ್ದಿಲ್ಲ. ಇಂದು ಆ ಕರಾಳ ಇತಿಹಾಸವನ್ನು ಅಳಿಸಿ ಹಾಕುವಲ್ಲಿ ಆರ್ಸಿಬಿ ಯಶಸ್ವಿಯಾಗಿದೆ.