ಬೆಂಗಳೂರು: ಇಂಪಾದ ಮೆಲೋಡಿ ಹಾಡುಗಳು ಎಂದಿಗೂ ಜನರ ಜೀವನದ ಅವಿಭಾಜ್ಯ ಅಂಗವಾಗಿರುತ್ತವೆ. ಎಲ್ಲಾ ಕಾಲದಲ್ಲೂ ಎಲ್ಲರನ್ನೂ ಆಕರ್ಷಿಸುವ ಹಲವಾರು ಮೆಲೋಡಿ ಹಾಡುಗಳ ಗುಂಪಿಗೆ ಸೇರಬಹುದಾದ ಅದ್ಭುತವಾದ ಮೆಲೋಡಿ ಸಾಂಗ್ ಖ್ಯಾತ ಸಿನಿಮಾ ನಿರ್ದೇಶಕ ಸಂತೋಷ್ ಕೊಡೆಂಕೇರಿ ನಿರ್ದೇಶನದ ‘ರವಿಕೆ ಪ್ರಸಂಗ’ ಚಿತ್ರದ ‘ಮನಸಲಿ ಜೋರು ಕಲರವ’ ಎಂಬ ಹಾಡು. ಈ ಮೆಲೋಡಿ ಹಾಡನ್ನು ನೂರಾರು ಎವರ್ ಗ್ರೀನ್ ಸೂಪರ್ ಹಿಟ್ ಮೆಲೋಡಿ ಹಾಡುಗಳನ್ನು ನೀಡಿರುವ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರು ಬಿಡುಗಡೆ ಮಾಡಿದ್ದಾರೆ.ಈ ವರ್ಷದ ಅತ್ಯುತ್ತಮ


ಮೆಲೋಡಿ ಹಾಡುಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಎಲ್ಲಾ ಅಂಶಗಳನ್ನು ಹೊಂದಿರುವ ಈ ಹಾಡಿಗೆ ಕಿರಣ್ ಕಾವೇರಪ್ಪ ಅವರ ಅದ್ಭುತ ಸಾಹಿತ್ಯ, ಮಾನಸ ಹೊಳ್ಳ ಅವರು ಮಧುರವಾದ ಧ್ವನಿ ಹಾಗೂ ವಿನಯ್ ಶರ್ಮಾ ಅವರ ಇಂಪಾದ ಸಂಗೀತ ಇದೆ. ಸಂತೋಷ್ ಕೊಡಂಕೇರಿ ಅವರ ಚಿತ್ರಕಥೆ-ನಿರ್ದೇಶನದಲ್ಲಿ ಪಾವನ ಸಂತೋಷ್ ಅವರ ಕಥೆ-ಸಂಭಾಷಣೆ ಇರುವ ‘ರವಿಕೆಪ್ರಸಂಗ’ ಚಿತ್ರವನ್ನು “ದೃಷ್ಟಿ ಮಿಡಿಯಾ & ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿಲಾಗಿದೆ. ಚಿತ್ರದ ಎಲ್ಲಾ ಕೆಲಸಗಳು ಮುಕ್ತಾಯವಾಗಿದ್ದು ಬಿಡುಗಡೆಯ ಹೊಸ್ತಿಲಲ್ಲಿ ಜನರನ್ನು ರಂಜಿಸಲಿದೆ. ಜನವರಿ ತಿಂಗಳಲ್ಲಿ ಚಿತ್ರ ತೆರೆ ಕಾಣಲಿದೆ ಎಂದು ಸಂತೋಷ್ ಕೊಡೆಂಕೇರಿ ತಿಳಿಸಿದ್ದಾರೆ.


ಗೀತಾ ಭಾರತಿ ಭಟ್, ಸಂತೋಷ್ ಕೊಡೆಂಕೇರಿ
ಗೀತಾ ಭಾರತಿ ಭಟ್, ಸುಮನ್ ರಂಗನಾಥ್, ರಾಕೇಶ್ ಮಯ್ಯ ಸಂಪತ್ ಮೈತ್ರೇಯ, ಪದ್ಮಜಾ ರಾವ್, ಕೃಷ್ಣಮೂರ್ತಿ ಕವತಾರ್ ಪ್ರವೀಣ್ ಅಥರ್ವ, ರಘು ಪಾಂಡೇಶ್ವರ್, ಹನುಮಂತೇ ಗೌಡ ಖುಷಿ ಆಚಾರ್ ಹನುಮಂತ್ ರಾವ್ ಕೆ ಹಾಗೂ ಇತರರು.
ಕಥೆ ಮತ್ತು ಸಂಭಾಷಣೆ: ಪಾವನಾ ಸಂತೋಷ್,
ಚಿತ್ರಕಥೆ ಮತ್ತು ನಿರ್ದೇಶನ: ಸಂತೋಷ್ ಕೊಡಂಕೇರಿ,
ಛಾಯಾಗ್ರಹಣ: ಮುರಳಿಧರ್, ಎನ್, ಸಂಕಲನ: ರಘು ಶಿವರಾಮ್, ಸಂಗೀತ: ವಿನಯ್ ಶರ್ಮಾ,ಹಿನ್ನೆಲೆ ಸಂಗೀತ: ರಮೇಶ್ ಕೃಷ್ಣ,ವಸಾಹಿತ್ಯ: ಕಿರಣ್ ಕಾವೇರಪ್ಪ
ನಿರ್ಮಾಣ ಸಂಸ್ಥೆ: ದೃಷ್ಟಿ ಮೀಡಿಯಾ ಮತ್ತು ಪ್ರೊಡಕ್ಷನ್ಸ್
ಸಹ ನಿರ್ಮಾಪಕರು : ಶಂತನು ಮಹರ್ಷಿ, ನಿರಂಜನ್ ಗೌಡ, ಗಿರೀಶ್ ಎಸ್.ಎಂ, ಶಿವರುದ್ರಯ್ಯ ಎಸ್ ವಿ














