ಸುಳ್ಯ; ಸಂತೋಷ್ ಕೊಡೆಂಕೇರಿ ನಿರ್ದೆಶನದ ರವಿಕೆ ಪ್ರಸಂಗ ಸಿನಿಮಾ. ಫೆ.16 ರಂದು ರಾಜ್ಯದಾದ್ಯಂತ ಬಿಡುಗಡೆಯಾಗಿದೆ. ಅತ್ಯುತ್ತಮ ಕಥೆ, ತೆಳು ಹಾಸ್ಯ, ಸುಂದರ ಹಾಡುಗಳ ಮೂಲಕ ಮೋಹಕವಾಗಿ ಮೂಡಿಬಂದಿರುವ ರವಿಕೆ ಪ್ರಸಂಗ ಜನಮೆಚ್ಚುಗೆ ಪಡೆದು ಮುನ್ನುಗ್ಗುತಿದೆ. ‘ರವಿಕೆ ಪ್ರಸಂಗ’. ಹೆಸರೇ ಹೇಳುವಂತೆ ಇಡೀ ಸಿನಿಮಾ ರವಿಕೆಯೊಂದರ ಸುತ್ತ ಸುತ್ತುತ್ತದೆ. ತನ್ನ ಕನಸಿನ ರವಿಕೆಯನ್ನು ಕೆಡಿಸಿದ ಟೈಲರ್ ಒಂದು ಕಡೆಯಾದರೆ, ಆತನ ವಿರುದ್ಧ ಕಾನೂನು ಸಮರಕ್ಕೆ ಮುಂದಾಗುವ ನಾಯಕಿ ಮತ್ತೊಂದು ಕಡೆ… ಅಂತಿಮವಾಗಿ
ಏನಾಗುತ್ತದೆ ಎಂಬುದೇ ಸಿನಿಮಾದ ಹೈಲೈಟ್ಸ್.
ನಿರ್ದೇಶಕ ಸಂತೋಷ್ ಕೊಡಂಕೇರಿ ಒಂದು ಕಂಟೆಂಟ್ ಸಿನಿಮಾವಾಗಿ ಇದನ್ನು ಕಟ್ಟಿಕೊಡಲು ಪ್ರಯತ್ನಿಸಿರುವುದು ಎದ್ದು ಕಾಣುತ್ತದೆ. ಅದೇ ಕಾರಣದಿಂದ ಸೀಮಿತ ಪಾತ್ರಗಳನ್ನಿಟ್ಟುಕೊಂಡು ಸಿನಿಮಾವನ್ನು ಸುಂದರವಾಗಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಸಿನಿಮಾ ಸುಳ್ಯ ಪರಿಸರ ಹಾಗೂ ಇಲ್ಲಿನ ಕನ್ನಡದಲ್ಲೇ ಮೂಡಿಬಂದಿದೆ. ಸಣ್ಣ ಸಣ್ಣ ವಿಚಾರಗಳು ಹೇಗೆ ದೊಡ್ಡದಾಗುತ್ತವೆ ಮತ್ತು ಸಮಾಜ ಎಷ್ಟೇ ಮುಂದುವರೆದರೂ ಕೆಲವರು ನೋಡುವ ದೃಷ್ಟಿ ಬದಲಾಗುವುದಿಲ್ಲ ಎಂಬ ಅಂಶವನ್ನು ಚಿತ್ರದಲ್ಲಿ ಹೇಳಲಾಗಿದೆ. ಇಡೀ ಚಿತ್ರವನ್ನು ನೈಜವಾಗಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಚಿತ್ರದಲ್ಲಿನ ಸುಂದರ ಲೊಕೇಶನ್ಗಳು ಗಮನ ಸೆಳೆಯುತ್ತವೆ. ಪಾವನಾ ಸಂತೋಷ್ ಅವರ ಕಥೆ, ಸಂಭಾಷಣೆ ಸಿನಿಮಾದ ಪ್ಲಸ್ ಗಳಲ್ಲಿ ಒಂದು.
ಹೆಣ್ಣು ಮಕ್ಕಳಿಗೆ ಣ್ಣು ಮಕ್ಕಳಿಗೆ ಸೀರೆ ಎಂದರೆ ಅಚ್ಚುಮೆಚ್ಚು. ಸೀರೆಗೊಪ್ಪುವ ಅಂದದೊಂದು ರವಿಕೆ ಇದ್ದರಂತೂ ಸ್ವರ್ಗಕ್ಕೆ ಮೂರೇ ಗೇಣು. ಇಂಥದ್ದೇ ರವಿಕೆ ರಗಳೆಯ ಸುತ್ತ ಹೆಣೆಯಲಾಗಿರುವ ಕಥಾಸಾರವೇ ರವಿಕೆ ಪ್ರಸಂಗ. ಕಥಾನಾಯಕಿ (ಸಾನ್ವಿ)ಗೆ ಮದುವೆ ಮಾಡಲು ಮನೆಯವರು ವರನ ಹುಡುಕಾಟದಲ್ಲಿರುತ್ತಾರೆ. ಆದರೆ ನಾಯಕಿಯಂತೂ ‘ತನಗೊಪ್ಪುವಂಥ ಹುಡುಗ ಸಿಗುವವರೆಗೂ ಮದುವೆಗೆ ಸುತಾರಾಂ ಒಪ್ಪುವುದಿಲ್ಲ’ ಎಂಬ ಕರಾರು ಹಾಕಿ ಜೀವನ ಸಾಗಿಸುತ್ತಿರುತ್ತಾಳೆ.
ಸಾಕಷ್ಟು ಹುಡುಗರು ಬಂದು ಹೋದರೂ, ಒಂದಿಲ್ಲೊಂದು ಕಾರಣ ಕೊಟ್ಟು ಬಂದ ಹುಡುಗರನ್ನೆಲ್ಲ ಒಪ್ಪುವುದೇ ಇಲ್ಲ. ಹಾಗೋ ಹೀಗೋ ಒಂದೊಳ್ಳೆ ವರ ಸಿಗುವ ಖುಷಿಯಲ್ಲಿದ್ದ ನಾಯಕಿಗೆ ರವಿಕೆಯೇ ಕಂಟಕವಾಗುತ್ತದೆ. ಆಕೆಗೆ ರವಿಕೆ ಹೊಲಿದ ಟೇಲರ್ ಮೇಲೆ ಇನ್ನಿಲ್ಲದ ಸಿಟ್ಟು ಬರುತ್ತದೆ. ರಾತ್ರೋರಾತ್ರಿ ಪೊಲೀಸ್ ಠಾಣೆ ಮೆಟ್ಟಿಲೇರುವ ನಾಯಕಿಗೆ, ತಕ್ಷಣಕ್ಕೆ ನ್ಯಾಯ ಸಿಗುವುದಿಲ್ಲ. ಸೀದಾ ಕೋರ್ಟ್ ಮೊರೆ ಹೋಗುತ್ತಾಳೆ. ಅಸಲಿ ಕಥೆ ನಡೆಯುವುದೇ ಅಲ್ಲಿ..!
ಇಡೀ ಸಿನಿಮಾವನ್ನು ತೆಳು ಹಾಸ್ಯದ ಮೂಲಕ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ ನಿರ್ದೇಶಕ ಸಂತೋಷ್ ಕೊಡಂಕೇರಿ, ಸುಳ್ಯದ ಸುತ್ತಮುತ್ತ ನಡೆಯುವ ಕಥನ, ಇಲ್ಲಿನ ಅತಿ ಸೊಗಡನ್ನು ಕಟ್ಟಿಕೊಟ್ಟಿದೆ.
ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಗೀತಾ ಭಾರತಿ ಭಟ್ ಪಾತ್ರಕ್ಕೆ ಚೆನ್ನಾಗಿ ಹೊಂದಿಕೊಂಡಿದ್ದಾರೆ. ಅದಕ್ಕೆ ಪೂರಕವಾಗಿ ಇತರ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಸುಮನ್ ರಂಗನಾಥ್, ರಾಕೇಶ್ ಮಯ್ಯ, ಸಂಪತ್ ಮೈತ್ರೇಯ, ಪದ್ಮಜಾ ರಾವ್, ಕೃಷ್ಣಮೂರ್ತಿ ಕವತಾರ್, ಪ್ರವೀಣ್ ಅಥರ್ವ, ರಘು ಪಾಂಡೇಶ್ವರ್, ಹನುಮಂತೇ ಗೌಡ ಕಥೆಯ ಓಘಕ್ಕೆ ಸಾಥ್ ನೀಡಿದ್ದಾರೆ.
ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಭಾರತಿ ಭಟ್ ಪಾತ್ರಕ್ಕೆ ಚೆನ್ನಾಗಿ ಹೊಂದಿಕೊಂಡಿದ್ದಾರೆ. ಅದಕ್ಕೆ ಪೂರಕವಾಗಿ ಇತರ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಸುಮನ್ ರಂಗನಾಥ್, ರಾಕೇಶ್ ಮಯ್ಯ, ಸಂಪತ್ ಮೈತ್ರೇಯ, ಪದ್ಮಜಾ ರಾವ್, ಕೃಷ್ಣಮೂರ್ತಿ ಕವತಾರ್, ಪ್ರವೀಣ್ ಅಥರ್ವ, ರಘು ಪಾಂಡೇಶ್ವರ್, ಹನುಮಂತೇ ಗೌಡ ಕಥೆಯ ಓಘಕ್ಕೆ ಸಾಥ್ ನೀಡಿದ್ದಾರೆ.
ಅತ್ಯುತ್ತಮ ಕಥೆ, ಹಾಡು, ಇಮೋಷನ್, ಕಾಮಿಡಿ ಮೇಳೈಸಿದ ಸಿನಿಮಾ ಅತ್ಯುತ್ತಮ ಫ್ಯಾಮಿಲಿ ಸಿನಿಮಾ. ಕುಟುಂಬ ಸಮೇತ ಬಂದು ನೋಡಿ ಸಂತಸ ಪಡಬಹುದಾದ ಸಿನಿಮಾ ಎಲ್ಲರೂ ಬಂದು ಸಿನಿಮಾ ನೋಡಿ ಬೆಂಬಲ ನೀಡಬೇಕು ಎಂದು ಚಕನಚಿತ್ರ ನಿರ್ದೇಶಕ ಸಂತೋಷ್ ಕೊಡೆಂಕೇರಿ ಹೇಳಿದರು.
ವಿಭಿನ್ನ ಕಥಾ ಹಂದರ ಹೊಂದಿರುವ ಫ್ಯಾಮಿಲಿ ಎಂಟರ್ಟೈನರ್ ಚಿತ್ರ ರವಿಕೆ ಪ್ರಸಂಗ ಸಿನಿಮಾ ಕರ್ನಾಟಕದಲ್ಲಿ ಫೆ.16 ರಂದು ಬಿಡುಗಡೆ ಆಗಿದ್ದು ಟ್ರೆಂಡಿಂಗ್ ಆಗುತಿದೆ.