ಸುಬ್ರಹ್ಮಣ್ಯ:ಆರ್ಟ್ ಆಫ್ ಲೀವಿಂಗ್ ಪ್ರತಿಷ್ಠಾನದ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಸೋಮವಾರ ಹೆಲಿಕಾಪ್ಟರ್ ಮೂಲಕ ಬಿಳಿನೆಲೆಗೆ ಆಗಮಿಸಿದರು. ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ನಿರ್ಮಿತವಾದ ಹೆಲಿಪ್ಯಾಡ್ಗೆ ಆಗಮಿಸಿದ ಗುರೂಜಿ
ಅವರನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸಲಾಯಿತು. ಗುರೂಜಿಗೆ ಫಲಕಾಣಿಕೆ ನೀಡಿ ಹೂ ಹಾರ ಹಾಕಿ ಶಾಲು ಹೊದಿಸಿ ಭಕ್ತಿಪೂರ್ವಕವಾಗಿ ಸ್ವಾಗತಿಸಲಾಯಿತು. ಬಳಿಕ ಅವರು ರಸ್ತೆ ಮೂಲಕ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳಿದರು.ಈ ಸಂದರ್ಭ ಆರ್ಟ್ ಆಫ್ ಲೀವಿಂಗ್ನ ಕೋ ಆರ್ಡಿನೇಟರ್ ದಿನೇಶ್.ಕೆ,ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಶ್ರೀವತ್ಸ ಬೆಂಗಳೂರು, ಪ್ರಮುಖರಾದ ಗೋಪಾಲಕೃಷ್ಣ.ಬಿ, ಶ್ರೀಕೃಷ್ಣ ಶರ್ಮ, ಗಣಪತಿ ಭಟ್, ಸತ್ಯಶಂಕರ ಭಟ್, ಹಿರಿಯಣ್ಣ ಗೌಡ, ರಾಜೇಶ್ ಎನ್.ಎಸ್, ಗುರುಪ್ರಸಾದ್ ಪಂಜ, ಬಿಪಿನ್ ಜಾಕೆ, ಆಕಾಶ್ ಕುಮಾರ್ ಬೆಳ್ಳಿ, ನಿತಿನ್ ಭಟ್ ಉಪಸ್ಥಿತರಿದ್ದರು