ಬೆಂಗಳೂರು:ಪಡಿತರ ಚೀಟಿ ಸಮಸ್ಯೆಗಳ ಬಗ್ಗೆ ಶಾಸಕಿ ಭಾಗೀರಥಿ ಮುರುಳ್ಯ ಅವರು ವಿಧಾನಾಭೆಯಲ್ಲಿ ಪ್ರಶ್ನಿಸಿದ್ದಾರೆ. ಆಹಾರ, ನಾಗರಿಕ ಸರಬರಾಜು ಇಲಾಖಾ ಸಚಿವರು ಶಾಸಕರ ಲಿಖಿತ ಪ್ರಶ್ನೆಗೆ ಉತ್ತರಿಸಿದ್ದಾರೆ. ಹೊಸದಾಗಿ ಎಪಿಎಲ್ ಮತ್ತು ಬಿಪಿಎಲ್ ಪಡಿತರ ಚೀಟಿ ಅವಕಾಶ ಕಲ್ಪಿಸದಿರುವ ಕಾರಣ ಸಾರ್ವಜನಿಕರಿಗೆ ಪಡಿತರ ಚೀಟಿ ಪಡೆಯಲು ತೊಂದರೆ ಉಂಟಾಗುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆಯೇ ಯಾವ ಕಾರಣಕ್ಕಾಗಿ ಸಾರ್ವಜನಿಕರು ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಮುಕ್ತವಾಗಿ ಅವಕಾಶ ಕಲ್ಪಿಸಲಾಗಿಲ್ಲ.
ಎಪಿಎಲ್ ಮತ್ತು ಬಿಪಿಎಲ್ ಪಡಿತರ ಪಡೆದುಕೊಂಡಿರುವ
ಸಾರ್ವಜನಿಕರಿಗೆ ಅಗತ್ಯವಿದ್ದಾಗ ನಿರಂತರವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲು ಸರ್ಕಾರಕ್ಕೆ ಏನಾದರೂ ಸಮಸ್ಯೆ ಇದೆಯೇ,
ಎಪಿಎಲದ ಪಡಿತರ ಚೀಟಿದಾರರಿಗೆ ಸರಾಗವಾಗಿ ಅಕ್ಕಿ ಪೂರೈಕೆ ಆಗದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಸದರಿ ಸಮಸ್ಯೆ ಸರಿಪಡಿಸಲು ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂದು ಶಾಸಕರು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿಸಿರುವ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನ ಇಲಾಖಾ ಸಚಿವರು
ಆಹಾರ ದತ್ತಾಂಶವನ್ನು ನಿರ್ವಹಿಸುತ್ತಿರುವ ಸರ್ವರ್ಗಳಿಂದ ಮತ್ತು ಆಹಾರ ಅಪ್ಲಿಕೇಶನ್ ನಿಂದ ಕೇಂದ್ರ ಸರ್ಕಾರಕ್ಕೆ ಪ್ರತಿ ತಿಂಗಳು ಪಡಿತರ ಚೀಟಿಗಳ ವಿವರ ಮತ್ತು ವಿತರಣಾ ಡೇಟಾವನ್ನು ಆನ್ಲೈನ್ ಮುಖಾಂತರ ಸಲ್ಲಿಸಲಾಗುತ್ತಿದೆ. ಇದರೊಂದಿಗೆ ಪ್ರತಿ ಮಾಹೆ ಆನ್ಲೈನ್ ಮುಖಾಂತರ ಪಡಿತರ ಹಂಚಿಕೆಯನ್ನು ಜನರೇಟ್ ಮಾಡಲು ಸರ್ವರ್ ಬಳಕೆಯಾಗುತ್ತಿದೆ. ತದನಂತರ ಪ್ರತಿ ಮಾಹೆಯ ಪಡಿತರ ವಿತರಣೆಯ ಪೋಸ್ ಮುಖಾಂತರ ಮಾಡಲಾಗುತ್ತಿದ್ದು, ಇದಕ್ಕಾಗಿ ಸರ್ವರ್ ಬಳಕೆಯಾಗುತ್ತಿದೆ. ಈ ಕಾರಣಗಳಿಂದಾಗಿ ಸರ್ವರ್ ಮೇಲೆ ಹೆಚ್ಚಿನ ಒತ್ತಡ ಇರುತ್ತದೆ. ಆದಾಗ್ಯೂ ಪ್ರತಿ ಮಾಹೆ 1 ರಿಂದ 10 ನೇ ತಾರೀಖಿನವರೆಗೆ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿರುತ್ತದೆ ಎಂದು ಉತ್ತರ ನೀಡಿದ್ದಾರೆ.
ಪ್ರಸ್ತುತ ಪ್ರತಿ ಮಾಹೆಯ ದಿನಾಂಕ 17 ರಿಂದ ದಿನಾಂಕ 25 ರವರೆಗೆ ಸರ್ವರ್ ಮತ್ತು AHARA ಅಪ್ಲಿಕೇಶನ್ ಅನ್ನು DBT ಅನ್ನಭಾಗ್ಯ ಯೋಜನೆಗೆ ಸಹ ಉಪಯೋಗಿಸಿಕೊಳ್ಳಲಾಗುತ್ತಿದೆ.ಇದರಿಂದ ತಿಂಗಳ 20 ರಿಂದ 30 ರವರೆಗೆ ಸರ್ವರ್ ಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿರುವುದರಿಂದ ಪಡಿತರ ಚೀಟಿ ತಿದ್ದುಪಡಿಗೆ ನಿರಂತರವಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡುವುದು ಕಷ್ಟ ಸಾಧ್ಯವಾಗುತ್ತಿದೆ. ರಾಜ್ಯದಲ್ಲಿ ಪ್ರಸ್ತುತ ಬೆಂಗಳೂರು, ಮೈಸೂರು, ಕಲಬುರಗಿ, ಪ್ರದೇಶಗಳಿಗೆ 3 ಸರ್ವರ್ ಗಳನ್ನು ಬಳಸಲಾಗುತ್ತಿದೆ. ಈಗಿನ ಸರ್ವರ್ಗಳು ಹೆಚ್ಚಿನ ಒತ್ತಡ ಹೊರಲು ಸಾಧ್ಯವಾಗದ ಕಾರಣದಿಂದ ಉದ್ಭವಿಸಿದ ಈ ಸಮಸ್ಯೆಯನ್ನು ನಿವಾರಿಸಲು ಆಹಾರ ತಂತ್ರಾಂಶದ ಸರ್ವರ್ಗಳನ್ನು ಎನ್. ಐ. ಸಿ.ಯಿಂದ ಕೆ.ಎಸ್.ಡಿ.ಸಿಗೆ ವರ್ಗಾಯಿಸಲಾಗುತ್ತಿದೆ. ಅದರಂತೆ ಈ ತಂತ್ರಾಂಶದ ಮೈಗ್ರೇಷನ್ ಕಾರ್ಯವು ಪ್ರಗತಿ ಯಲ್ಲಿರುತ್ತದೆ, ಎನ್, ಐ, ಸಿ ಯಿಂದ ಕೆ.ಎಸ್.ಡಿ.ಸಿ’ಗೆ ಮೈಗ್ರೇಶನ್ ಕಾರ್ಯ ಪೂರ್ಣಗೊಂಡ ನಂತರ ಪಡಿತರ ಚೀಟಿಯಲ್ಲಿನ ಹೆಸರು ಸೇರ್ಪಡೆ/ತಿದ್ದುಪಡಿ ಬಗ್ಗೆ ನಿರಂತರವಾಗಿ ಅವಕಾಶ ಕಲ್ಪಿಸಲು ಸಾಧ್ಯವಾಗುತ್ತದೆ.
ಎಪಿಎಲ್ ಪಡಿತರ ಚೀಟಿದಾರರಿಗೆ ಸರಾಗವಾಗಿ ಅಕ್ಕಿ ಪೂರೈಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆಯು ಪರಿಶೀಲನಾ ಹಂತದಲ್ಲಿದೆ ಎಂದು ಸಚಿವರು ಉತ್ತರಿಸಿದ್ದಾರೆ.









