ಸುಳ್ಯ: ಸುಳ್ಯ ಚೆನ್ನಕೇಶವ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ರಥಬೀದಿಯ ರಥೋತ್ಸವ ಕಟ್ಟೆಯನ್ನು ಈ ಬಾರಿ ವಿಶೇಷವಾಗಿ ಅಲಂಕರಿಸಲಾಗಿತ್ತು. ಪುಷ್ಪಾಲಂಕಾರದಿಂದ ಕಂಗೊಳಿಸಿದ್ದ ರಥೋತ್ಸವ ಕಟ್ಟೆ ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿತ್ತು. ರಥಬೀದಿಯ
ರಥೋತ್ಸವ ಸಮಿತಿಯ ನೇತೃತ್ವದಲ್ಲಿ ಕಟ್ಟೆಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಸಮಿತಿಯ ಮಹಾಪೋಷಕರಾದ ಚಂದ್ರಶೇಖರ ಜ್ಯೋತಿಷ್ಯರು, ಅಧ್ಯಕ್ಷರಾದ ರಾಘವ ಬಲ್ಯಾಯ ಹಾಗೂ ಸಂಚಾಲಕರಾದ ಕೆ.ಗೋಕುಲ್ದಾಸ್ ನೇತೃತ್ವದಲ್ಲಿ ಕಟ್ಟೆಯನ್ನು ಅಲಂಕರಿಸಲಾಗಿತ್ತು. ಕೇರಳದ ಚೆಂಡೆ ವಾದನವನ್ನೂ ಏರ್ಪಡಿಸಲಾಗಿತ್ತು.










