ಸುಳ್ಯ: ಶಿಕ್ಷಣ ಇಲಾಖೆಯಲ್ಲಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿ, ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದು ನಿವೃತ್ತರಾದ ರತ್ನಾಕರ ಕೆ. ಅವರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ಸುಳ್ಯ ಸಿ.ಎ. ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್ ಯು.ಕೆ. ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ
ನಿವೃತ್ತ ಶಿಕ್ಷಕ ಚಿದಾನಂದ ಯು.ಎಸ್. ಅಭಿನಂದನಾ ಭಾಷಣ ಮಾಡಿದರು. ಸಮಾರಂಭದಲ್ಲಿ ನಿವೃತ್ತರಾದ ರತ್ನಾಕರ್ ಕೆ. ಹಾಗೂ ಅವರ ಪತ್ನಿ ತೇಜಾವತಿ ಹಾಗೂ ಮಗಳು ಯಶ್ವಿತಾರನ್ನು ಅಭಿಮಾನಿ ಬಳಗದಿಂದ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಜಿಲ್ಲಾಪಿ.ಎಂ. ಪೋಷನ್ ಅಭಿಯಾನದ ಶಿಕ್ಷಣಾಧಿಕಾರಿ ಎಂ.ಪಿ.ಜ್ಞಾನೇಶ್, ಸುಳ್ಯ ತಾ.ಪಂ. ಇ.ಒ. ರಾಜಣ್ಣ, ಹುಣಸೂರು ತಾಲೂಕು ಶಿಕ್ಷಣಾಧಿಕಾರಿ ಎಸ್.ಪಿ. ಮಹಾದೇವ, ಸೋಮವಾರ ಪೇಟೆ ಬಿ.ಇ.ಒ. ಕೃಷ್ಣಪ್ಪ, ಪುತ್ತೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ನಿವೃತ್ತ ಶಿಕ್ಷಣಾಧಿಕಾರಿಗಳಾದ ಕೆಂಪಲಿಂಗಪ್ಪ, ರಮೇಶ್ ಬಿ.ಇ., ಸತೀಶ್, ನಿವೃತ್ತ ಡಿವೈಪಿಸಿ ಎಸ್.ಪಿ.ಶಿವಕುಮಾರ್, ಸೋಮಣ್ಣ ಮೈಸೂರು, ಸುಳ್ಯ ಅಕ್ಷರ ದಾಸೋಕ ಸಹಾಯಕ ನಿರ್ದೇಶಕಿ ವೀಣಾ ಎಂ.ಟಿ., ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸೂಫಿ ಪೆರಾಜೆ, ಸುಳ್ಯ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ನಿತೀನ್ ಪ್ರಭು ವೇದಿಕೆಯಲ್ಲಿದ್ದರು.
ಪ್ರಮೀಳಾ ರಾಜ್ ಪ್ರಾರ್ಥಿಸಿದರು. ಬಿ.ಇ.ಒ. ಶೀತಲ್ ಯು.ಕೆ. ಸ್ವಾಗತಿಸಿದರು. ಬಿ.ಒ. ಕಚೇರಿಯ ಶಿವಪ್ರಸಾದ್ ಕೆ.ವಿ. ರತ್ನಾಕರ್ರ ಅಭಿನಂದನಾ ಪತ್ರ ವಾಚಿಸಿದರು. ಆಶಾ ಅಂಬೆಕಲ್ಲು, ಮಮತಾ ಕಾರ್ಯಕ್ರಮ ನಿರೂಪಿಸಿದರು.












