ಮೈಸೂರು: ಭರತನಾಟ್ಯ ಕಲಾವಿದೆ ಹಾಗೂ ಗುರು ಡಾ. ಚೇತನಾ ರಾಧಾಕೃಷ್ಣ ಅವರು 2024ರ ಉದ್ರೋ ಮಾಘೋದಿ ನೃತ್ಯ ಉತ್ಸವದಲ್ಲಿ ಭಾಗವಹಿಸಿ ತನ್ನ ವಿಸ್ಮಯಕಾರಿ ನೃತ್ಯದಿಂದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಪಶ್ಚಿಮ ಬಂಗಾಳದ ಅಸನ್ಸೋಲ್ನ ಜಗನ್ನಾಥ ದೇವಸ್ಥಾನದಲ್ಲಿ ನ. 23 ಮತ್ತು 24 ರಂದು ನೃತ್ಯೋತ್ಸವ ನಡೆಯಿತು.ನೃತ್ಯೋತ್ಸವದ ಮೊದಲ ದಿನ
ಡಾ. ಚೇತನಾ ರಾಧಾ ಕೃಷ್ಣಾ ತನ್ನ ಏಕವ್ಯಕ್ತಿ ಭರತನಾಟ್ಯ ಪ್ರಸ್ತುತಿ ಮಾಡಿದರು. ಆ ದಿನದ ಕಾರ್ಯಕ್ರಮವು ಸಾಂಸ್ಕೃತಿಕ ವೈಭವ ಹಾಗೂ ಧಾರ್ಮಿಕ ನೃತ್ಯಗಳ ಸೂಕ್ಷ್ಮತೆಗಳನ್ನು ಅತ್ಯಂತ ಪ್ರಭಾವಶಾಲಿಯಾಗಿ ನಿರೂಪಿಸಿದವು.ಅವರು ಭರತನಾಟ್ಯದ ಪ್ರಾಚೀನ ಪದ್ಧತಿಯನ್ನು ಸರಳ ಹಾಗೂ ಆಳವಾದ ಮನೋಭಾವದಲ್ಲಿ ಪ್ರೇಕ್ಷಕರಿಗೆ ಪರಿಚಯಿಸಿದರು.
ಹಬ್ಬದ ಎರಡನೇ ದಿನ
ಡಾ. ಚೇತನಾ ರಾಧಾಕೃಷ್ಣಾ ಗುರುದೇವ್ ರವೀಂದ್ರನಾಥ ಟ್ಯಾಗೋರ್ ಅವರ ಕೃತಿ “ಭಾನು ಶಿಂಗರ ಪದಭೋಲಿ”ಯಲ್ಲಿ ರಾಧೆಯಾಗಿ ಅಭಿನಯಿಸಿ ನೃತ್ಯ ರೂಪಕದ ರಸ ನಿಷ್ಪತ್ತಿಗೆ ಕಾರಣರಾದರು. ಈ ನೃತ್ಯ ನಾಟಕವು ರವೀಂದ್ರನಾಥ ಟ್ಯಾಗೋರ್ ಅವರ ಗಾಢ ಕಲಾ ದೃಷ್ಟಿಯನ್ನು ಪರಿಚಯಿಸುವ ಅತಿ ವಿಶೇಷವಾದ ಅನುಭವವಾಯಿತು.ಈ ಹಬ್ಬವು ಹಿಂದೂ ಧಾರ್ಮಿಕ ಸಂಪ್ರದಾಯಗಳನ್ನು, ಕಲೆಯ ವೈಶಿಷ್ಟ್ಯಗಳನ್ನು ಹಾಗೂ ಭಾರತೀಯ ಸಂಸ್ಕೃತಿಯ ಮಹತ್ವವನ್ನು ಸಂಕೇತಿಸುವ ವೇದಿಕೆಯಾಗಿತ್ತು. ಉದ್ರೋ ಮಾಘೋದಿ ನೃತ್ಯ ಉತ್ಸವ ಭಾರತೀಯ ಶಾಸ್ತ್ರೀಯ ನೃತ್ಯಗಳ ಪ್ರತಿಷ್ಠೆಗೆ ಮಹತ್ವಪೂರ್ಣ ಕೊಡುಗೆ ನೀಡುತಿದೆ. ಭಿನ್ನ ಶೈಲಿಗಳ ನೃತ್ಯ ಪ್ರದರ್ಶನಗಳೊಂದಿಗೆ ಭಾರತದ ಸಾಂಸ್ಕೃತಿಕ ವಿವಿಧತೆಯನ್ನು ವಿಶಾಲವಾಗಿ ಪ್ರಸ್ತುತ ಪಡಿಸಿತು.