ಸುಳ್ಯ: ಮೀನುಗಾರಿಕೆ ಇಲಾಖೆಯ ವತಿಯಿಂದ ಸುಳ್ಯ ತಾಲೂಕಿನ ಉಬರಡ್ಕದ ಕೃಷ್ಣನ್ ನಾಯರ್ ರವರ ತೋಟದಲ್ಲಿ “ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ”ಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಮೀನು ಕೃಷಿಕರಿಗೆ ತರಬೇತಿ ಕಾರ್ಯಕ್ರಮ ನಡೆಯಿತು. ಮೀನು ಕೃಷಿಯಲ್ಲಿ
ಆಧುನಿಕ ತಂತ್ರಜ್ಞಾನಗಳು, ಇಲಾಖಾ ಸೌಲಭ್ಯಗಳು, ನೀರು ಮತ್ತು ಮಣ್ಣಿನ ಗುಣಮಟ್ಟದ ಕುರಿತು ಮಾಹಿತಿ ನೀಡಲಾಯಿತು. ಕೃಷ್ಣನ್ ನಾಯರ್ ಅವರ ಸಮಗ್ರ ಮೀನು ಕೃಷಿ ಪದ್ಧತಿ ಬಗ್ಗೆ ಕ್ಷೇತ್ರ ಭೇಟಿಯನ್ನು ನಡೆಸಲಾಯಿತು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಚಿತ್ರ ಕುಮಾರಿ ನೆರೆವೇರಿಸಿದರು. ಈ ಸಂದರ್ಭದಲ್ಲಿ ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರಶಾಂತ್ ಪಾನತ್ತಿಲ, ಮಹಾಶೀರ್ ಮತ್ಸ್ಯ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಮಹೇಶ್ ಕುಮಾರ್ ಮೇನಾಲ,
ಮಂಗಳೂರು ಮೀನುಗಾರಿಕೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಪದ್ಮನಾಭ ಇವರು ಉಪಸ್ಥಿತರಿದ್ದರು. ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ಶ್ರೀಮತಿ ಮಂಜುಳಾಶ್ರೀ ಶೆಣೈ ರವರು ಕಾರ್ಯಕ್ರಮ ಆಯೋಜಿಸಿ ನಿರೂಪಿಸಿದರು.