ಸುಳ್ಯ:ಪ್ರಜಾಧ್ವನಿ ಕರ್ನಾಟಕ ವತಿಯಿಂದ 1949 ನವೆಂಬರ್ 26 ಡಾ.ಬಿ.ಆರ್. ಅಂಬೇಡ್ಕರ್ ರಚಿತ ಸಂವಿಧಾನದ ಸಮರ್ಪಣಾ ದಿನದ ಸ್ಮರಣೆಗಾಗಿ ನಡೆಯುತ್ತಿರುವ ರಾಷ್ಟ್ರಧ್ವಜ ಗೌರವ ಯಾತ್ರೆ ಆರಂಭಗೊಂಡಿತು. ಸುಳ್ಯ ತಾಲೂಕಿನಾದ್ಯಂತ ನಡೆಯಲಿರುವ ಯಾತ್ರೆಗೆ ಸಂಪಾಜೆ ಗೇಟ್ ಬಳಿಯಲ್ಲಿ ಸುಳ್ಯ ತಹಶೀಲ್ದಾರ್ ಎಂ.ಮಂಜುಳ ಚಾಲನೆ ನೀಡಿದರು. ರಾಷ್ಟ್ರ ಧ್ವಜ, ಸಂವಿಧಾನ ಪೀಠಿಕೆ ಹಾಗೂ ಅಂಬೆಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಯಾತ್ರೆಗೆ
ಅವರು ಚಾಲನೆ ನೀಡಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಪ್ರಮುಖರಾದ ಪಿ.ಸಿ.ಜಯರಾಮ,ಪಿ.ಎಸ್ ಗಂಗಾಧರ, ಸೋಮಶೇಖರ ಕೊಯಿಂಗಾಜೆ, ಪ್ರಜಾಧ್ವನಿ ಕರ್ನಾಟಕದ ಸಂಚಾಲಕ ಗೋಪಾಲ್ ಪೆರಾಜೆ, ಸದಸ್ಯರಾದ ಅಶೋಕ್ ಎಡಮಲೆ, ಕೆ.ಎಸ್.ಉಮ್ಮರ್, ಮಹಮ್ಮದ್ ಕುಂಞಿ ಗೂನಡ್ಕ, ಎ.ಕೆ. ಇಬ್ರಾಹಿಂ ಕಲ್ಲುಗುಂಡಿ, ಪ್ರವೀಣ್ ಮುಂಡೋಡಿ, ಕೆ.ಪಿ.ಜಾನಿ ಕಲ್ಲುಗುಂಡಿ, ವಸಂತ ಪೆಲ್ತಡ್ಕ, ಅಶ್ರಫ್ ಎಲಿಮಲೆ, ಭರತ್ ಕುಕ್ಕುಜಡ್ಕ, ಅಬೂಸಾಲಿ, ಲಿಸ್ಸಿ ಮೊನಾಲಿಸ,ಭವಾನಿ ಶಂಕರ್ ಕಲ್ಮಡ್ಕ,ದಿವಾಕರ ಪೈ, ಲಕ್ಷ್ಮೀಶ ಗಬಲಡ್ಕ, ಆನಂದ ಬೆಳ್ಳಾರೆ, ಅಚ್ಚುತ ಮಲ್ಕಜೆ, ಮಾಧವ ಗೌಡ ಸುಳ್ಯಕೋಡಿ, ಮಹೇಶ್ ಬೆಳ್ಳಾಲ್ಕರ್ , ಬಿಟ್ಟಿ ನೆಡುನಿಲಂ, ಕೇಶವ ಮೊರoಗಲ್ಲು, ನಂದರಾಜ್ ಸಂಕೇಶ್, ಬೆಟ್ಟ ಜಯರಾಮ್ ಭಟ್, ಸೂರಜ್ ಹೊಸೂರು,ಸುರೇಶ್ ಪಿ.ಎಲ್, ರಿತಿನ್ ಡೆಮ್ಮಲೆ , ಸುಶೀಲ , ಪ್ರಮೀಳಾ ಪೆಲ್ತಡ್ಕ ,ಸೌಮ್ಯ ಕಡೆಪಾಲ, ಮೊದಲಾದವರು ಉಪಸ್ಥಿತರಿದ್ದರು.
ಶೌವಾದ್ ಗೂನಡ್ಕ ಸಂವಿಧಾನ ಪೀಠಿಕೆಯನ್ನು ವಾಚಿಸಿದರು. ಕಾಂತಿ ಬಿ. ಎಸ್ ಸ್ವಾಗತಿಸಿ, ಲೂಕಾಸ್ ಕಾರ್ಯಕ್ರಮ ನಿರೂಪಿಸಿದರು.
ರಾಷ್ಟ್ರಧ್ವಜ ಯಾತ್ರೆಗೆ ಕಲ್ಲುಗುಂಡಿಯಲ್ಲಿ ವರ್ತಕರ ಸಂಘದ ಅಧ್ಯಕ್ಷ ಚಕ್ರಪಾಣಿ ಅರಂತೋಡಿನಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಪ್ರಾಂಶುಪಾಲ ಕೆ.ಆರ್.ಗಂಗಾಧರ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಯಾತ್ರೆಯು ಮರ್ಕಂಜ, ಎಲಿಮಲೆ, ಗುತ್ತಿಗಾರು, ಸುಬ್ರಹ್ಮಣ್ಯ, ಪಂಜ, ನಿಂತಿಕಲ್ಲು, ಬೆಳ್ಳಾರೆ, ಐವರ್ನಾಡು, ಸೋಣಂಗೇರಿ, ಪೈಚಾರು ಮಾರ್ಗವಾಗಿ ಸಂಜೆ 5ಗಂಟೆಗೆ ಸುಳ್ಯದಲ್ಲಿ ಸಮಾವೇಶಗೊಳ್ಳಲಿದೆ. ಯಾತ್ರೆಯುದ್ದಕ್ಕೂ ಸ್ಥಳಗಳಲ್ಲಿ ಸಾರ್ವಜನಿಕರಿಂದ. ಸಾಮಾಜಿಕ ಧುರೀಣರಿಂದ, ರಾಜಕೀಯ ಪಕ್ಷಗಳ ಮುಖಂಡರಿಂದ ರಾಷ್ಟ್ರಧ್ವಜಕ್ಕೆ ಪುಷ್ಪಾರ್ಚನೆ ನಡೆಯಲಿದೆ.ಮಾತ್ರವಲ್ಲದೆ ಸಂವಿಧಾನದ ಕುರಿತಾದ ಮಾಹಿತಿಯನ್ನು ಸಂಘಟನೆಯ ನೆಲೆಯಿಂದ ಸದಸ್ಯರ ಭಾಷಣಗಳು ಇರುತ್ತವೆ.
ಸಂಜೆ ಸಭಾ ಕಾರ್ಯಕ್ರಮಕ್ಕೆ ಮೊದಲು ಸುಳ್ಯ ಗಾಂಧಿನಗರದಲ್ಲಿರುವ ಮಹಾತ್ಮಗಾಂಧಿ ಪ್ರತಿಮೆಗೆ ಹಾರಾರ್ಪಣೆ ನಡೆಯಲಿದೆ.
ಸಂಜೆ ಸುಳ್ಯದಲ್ಲಿ ನಡೆಯುವ ಸಮಾವೇಶದ ಕೊನೆಯ ಸಭಾ ಕಾರ್ಯಕ್ರಮದಲ್ಲಿ ಪುತ್ತೂರು ಸಹಾಯಕ ಕಮೀಷನರ್ ಜುಬಿನ್ ಮಹಾಪಾತ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ವಾಗ್ಮಿ ನಿಕೇತ್ ರಾಜ್ ಮೌರ್ಯ ಮುಖ್ಯ ಭಾಷಣ ಮಾಡಲಿದ್ದಾರೆ. ಸಾಮಾಜಿಕ ಮುಖಂಡರಾದ ಇನಾಯತ್ ಅಲಿ, ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ,ಸಯ್ಯಿದ್ ತಾಹ್ವಿರ್ ಸಅದಿ ಖಾ ಅಲವಿ ತಂಙಳ್, ಸೈಂಟ್ ಬ್ರಿಜಿಡ್ಸ್ ಚರ್ಚ್ನ ಧರ್ಮ ಗುರುಗಳಾದ ಫಾ.ವಿಕ್ಟರ್ ಡಿಸೋಜಾ, ಪ್ರಜಾಧ್ವನಿ ಸಂಚಾಲಕರಾದ ಗೋಪಾಲ್ ಪೆರಾಜೆ ಭಾಗವಹಿಸಲಿದ್ದಾರೆ.