ಎಲಿಮಲೆ: ಎಲಿಮಲೆಯ ರಂಜನಿ ಸಂಗೀತ ಸಭಾದ 14ನೇ ವರ್ಷದ ಸಂಗೀತ ಸಂಭ್ರಮ ಡಿಸೆಂಬರ್ 1ರಂದು ಭಾನುವಾರ ಶ್ರೀ ಕ್ಷೇತ್ರ ವಳಲಂಬೆಯ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ಸಭಾಭವನದಲ್ಲಿ ನಡೆಯಲಿದೆ. ದಿನಪೂರ್ತಿ ನಡೆಯುವ ಸಂಗೀತ ಸಂಭ್ರಮ
ಪೂರ್ವಾಹ್ನ 8-30ಕ್ಕೆ “ದೀಪೋಜ್ವಲನ ಯೊಂದಿಗೆ ಆರಂಭವಾಗಲಿದೆ. ಬಳಿಕ “ಗುರುವಂದನೆ” “ಗಾನಾಂಜಲಿ” ವಿದ್ಯಾರ್ಥಿಗಳಿಂದ
ಸಂಗೀತ ಗಾಯನ ನಡೆಯಲಿದೆ.ಪಕ್ಕವಾದ್ಯದಲ್ಲಿ ಧನಶ್ರೀ ಶಬರಾಯ ಮಂಗಳೂರು,
ಪ್ರಣೀತ್ ಬಳ್ಳಕ್ಕುರಾಯ ಉಡುಪಿ, ಹರಿಪ್ರಿಯ ಬಳ್ಳಕ್ಕುರಾಯ ಉಡುಪಿ (ಪಿಟೀಲು), ಶ್ರೀಚರಣ ಅಮೈಕಟ್ಟೆ, ವಿಶ್ವಮಿಹಿರ ಪುತ್ತೂರು,ವತಮನ್ ಎಕ್ಕಡ್ಕ( ಮೃದಂಗದಲ್ಲಿ ಸಹಕರಿಸಲಿದ್ದಾರೆ.
ಸಂಜೆ 5-30ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಛೇರಿ ನಡೆಯಲಿದೆ.ವಿದ್ವಾನ್ ಕಲ್ಯಾಣಪುರಂ ಎಸ್ ಅರವಿಂದ್ ಚೆನ್ನೈ ಅವರ ಹಾಡುಗಾರಿಕೆ ನಡೆಯಲಿದೆ.ವಯಲಿನ್ನಲ್ಲಿ ವಿದ್ವಾನ್ ರಾಹುಲ್ ರವಿಚಂದ್ರನ್ ಚೆನ್ನೈ,ಮೃದಂಗದಲ್ಲಿ ವಿದ್ವಾನ್ ಕಲೈಮಾಮಣಿ ಕೆ ವಿ ಪ್ರಸಾದ್ ಚೆನ್ನೈ, ಖಂಜೀರಾದಲ್ಲಿ ವಿದ್ವಾನ್ ನೆರ್ಗುಣಂ ಡಾ.ಎಸ್ ಶಂಕರ್ ಚೆನ್ನೈ ಸಹಕರಿಸಲಿದ್ದಾರೆ.ಎಂದು ರಂಜನಿ ಸಂಗೀತ ಸಭಾದ ಸಂಗೀತ ನಿರ್ದೇಶಕಿ ರೇಖಾರೇವತಿ ಹೊನ್ನಡಿ, ಹಾಗು ವ್ಯವಸ್ಥಾಪಕ ನಿರ್ದೇಶಕರಾದ ಸತ್ಯನಾರಾಯಣ ಹೊನ್ನಡಿ ತಿಳಿಸಿದ್ದಾರೆ.