ಚೊಕ್ಕಾಡಿ:ಎಲಿಮಲೆಯ ರಂಜನಿ ಸಂಗೀತ ಸಭಾದ ವತಿಯಿಂದ ಶ್ರೀರಾಮ ಸೇವಾ ಸಮಿತಿ ಚೊಕ್ಕಾಡಿ ಇದರ ಸಹಕಾರದೊಂದಿಗೆ ‘ನವರಾತ್ರಿ ವೈಭವಂ’ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಛೇರಿ ಇಂದು(ಅ.4ರಂದು) ಶನಿವಾರ ಸಂಜೆ 5.30 ರಿಂದ ಚೊಕ್ಕಾಡಿ ಶ್ರೀರಾಮ ದೇವಾಲಯದ ದೇಸೀ ಭವನದಲ್ಲಿ ನಡೆಯಲಿದೆ. ರಂಜನಿ ಸಂಗೀತ ಸಭಾದ ವತಿಯಿಂದ
ಪ್ರತಿವರ್ಷ ನವರಾತ್ರಿ ಸಂದರ್ಭದಲ್ಲಿ ವಿಶೇಷ ಸಂಗೀತ ಕಛೇರಿಯನ್ನು ಏರ್ಪಡಿಸಲಾಗುತ್ತದೆ. ಈ ಬಾರಿಯ ‘ನವರಾತ್ರಿ ವೈಭವಂ’ ನಲ್ಲಿ ವಿದುಷಿ ಅಶ್ವಿನಿ ಭಟ್ ಕೋಳಿಕ್ಕಜೆ ಅವರ ಹಾಡುಗಾರಿಕೆ ನಡೆಯಲಿದೆ.

ವಯಲಿನ್ನಲ್ಲಿ ವಿದುಷಿ ಸಿ.ವಿ. ಶ್ರುತಿ ಮೈಸೂರು, ಮೃದಂಗದಲ್ಲಿ ವಿದ್ವಾನ್ ನಂದನ್ ಕಶ್ಯಪ್ ಮೈಸೂರು ಮೋರ್ಸಿಂಗ್ನಲ್ಲಿ ವಿದ್ವಾನ್ ಬಾಲಕೃಷ್ಣ ಭಟ್ ಹೊಸಮನೆ ಪುತ್ತೂರು ಸಹಕರಿಸಲಿದ್ದಾರೆ.
ಎಂದು ರಂಜನಿ ಸಂಗೀತ ಸಭಾದ ಗುರುಗಳಾದ ರೇಖಾ ರೇವತಿ ಹೊನ್ನಾಡಿ ಹಾಗು ನಿರ್ದೇಶಕರಾದ ಸತ್ಯನಾರಾಯಣ ಹೊನ್ನಾಡಿ ತಿಳಿಸಿದ್ದಾರೆ.





