ಚೊಕ್ಕಾಡಿ:ಎಲಿಮಲೆಯ ರಂಜನಿ ಸಂಗೀತ ಸಭಾದ ಆಶ್ರಯದಲ್ಲಿ ಚೊಕ್ಕಾಡಿಯ ಶ್ರೀರಾಮ ಸೇವಾ ಸಮಿತಿಯ ಸಹಯೋಗದೊಂದಿಗೆ ‘ನವರಾತ್ರಿ ವೈಭವಂ’ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಅ.9 ಭಾನುವಾರ ಸಂಜೆ 5-30 ರಿಂದ ಚೊಕ್ಕಾಡಿ ಶ್ರೀರಾಮ ದೇವಾಲಯದ

ದೇಸೀ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಎಸ್ . ಮಹಾದೇವನ್ ತಿರುವನಂತಪುರಂ ಅವರ ಹಾಡುಗಾರಿಕೆ ನಡೆಯಲಿದೆ. ವಯಲಿನ್‌ನಲ್ಲಿ ಆದರ್ಶ್ ಅಜಯಕುಮಾರ್ ಗುರುವಾಯೂರು, ಮೃದಂಗದಲ್ಲಿ ವಿಷ್ಣು ಚಿಂತಾಮಣಿ ಗುರುವಾಯೂರು, ಮೋರ್ಸಿಂಗ್‌ನಲ್ಲಿ ಪಯ್ಯನ್ನೂರು ಟಿ . ಗೋವಿಂದಪ್ರಸಾದ್ ಸಹಕರಿಸಲಿದ್ದಾರೆ ಎಂದು ರಂಜನಿ ಸಂಗೀತ ಸಭಾದ ನಿರ್ದೇಶಕ ಸತ್ಯನಾರಾಯಣ ಹೊನ್ನಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.