ಸುಳ್ಯ:ಭಾರೀ ಮಳೆ ಮುಂದುವರಿದಿರುವ ಕಾರಣ ಜುಲೈ 6 ರಿಂದ ಮುಂದಿನ ಸೂಚನೆ ತನಕ ರಾಣಿಪುರಂ ಇಕೋ ಟೂರಿಸಂ ಕೇಂದ್ರಕ್ಕೆ ಸಾರ್ವಜನಿಕರ ಚಾರಣವನ್ನು ಸ್ಥಗಿತಗೊಳಿಸಲಾಗಿದೆ ಎಂದು ಡಿಎಫ್ಒ ಕೆ.ಅಶ್ರಫ್ ತಿಳಿಸಿದ್ದಾರೆ.ಭಾರೀ ಮಳೆ ಸುರಿಯುವ ಹಿನ್ನಲೆಯಲ್ಲಿ ಪ್ರವಾಸಿಗರ ಸುರಕ್ಷತೆಯ ದೃಷ್ಠಿಯಿಂದ ರಾಣಿಪುರಂ ಕೇಂದ್ರದ ಟ್ರಕ್ಕಿಂಗ್
ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಸೇರಿದಂತೆ ವಿವಿಧ ಭಾಗಗಳಿಂದ ಭಾರೀ ಸಂಖ್ಯೆಯಲ್ಲಿ ಮಳೆಗಾಲದ ಪ್ರಕೃತಿಯ ಸೊಬಗನ್ನು ಸವಿಯಲು ರಾಣಿಪುರಂ ಕೇಂದ್ರಕ್ಕೆ ಆಗಮಿಸುತ್ತಿದ್ದಾರೆ. ಇದೀಗ ಭಾರೀ ಮಳೆಯ ಹಿನ್ನಲೆಯಲ್ಲಿ ಪ್ರಯಾಣಿಕರ ಸುರಕ್ಷತೆಯ ದೃಷ್ಠಿಯಿಂದ ಇಂದಿನಿಂದ ಟ್ರಕ್ಕಿಂಗ್ ನಿಲ್ಲಿಸಲಾಗಿದೆ ಎಂದು ಪರಪ್ಪ ಬ್ಲಾಕ್ ಪಂಚಾಯತ್ ಸದಸ್ಯ ಅರುಣ್ ರಂಗತ್ತಮಲೆ ಮಾಹಿತಿ ನೀಡಿದ್ದಾರೆ. ಇದೀಗ ಮಳೆಗಾಲದ ಪ್ರಕೃತಿಯ ಸೊಬಗನ್ನು ಸವಿಯಲು ರಜಾ ದಿನಗಳಲ್ಲಿ ಹೆಚ್ಚು ಮಂದಿ ಆಗಮಿಸುತ್ತಿದ್ದಾರೆ. ಜುಲೈ 2 ರಂದು 3200 ಕ್ಕೂ ಹೆಚ್ಚು ಮಂದಿ ರಾಣಿಪುರಂ ಗಿರಿಶೃಂಗಕ್ಕೆ ಭೇಟಿ ನೀಡಿದ್ದರು.