ಸುಳ್ಯ:ಭಾರೀ ಮಳೆ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ಕೇರಳದ ಊಟಿ ಎಂದು ಪ್ರಸಿದ್ದಿ ಪಡೆದ ರಾಣಿಪುರಂ ಇಕೋ ಟೂರಿಸಂ ಕೇಂದ್ರಕ್ಕೆ ಚಾರಣವನ್ನು ಮತ್ತೆ ಪ್ರಾರಂಭಿಸಲಾಗಿದೆ. ಜುಲೈ 10ರಿಂದ ಟ್ರಕ್ಕಿಂಗ್ ಆರಂಭಿಸಲಾಗಿದ್ದು ಬೆಳಿಗ್ಗೆ 8 ರಿಂದ ಅಪರಾಹ್ನ 3ಗಂಟೆಯ ತನಕ ಪ್ರವೇಶ ನೀಡಲಾಗುವುದು. ಭಾರೀ ಮಳೆಯಿಂದ
ಜುಲೈ 6 ರಿಂದ 4 ದಿನಗಳ ಕಾಲ ಟ್ರಕ್ಕಿಂಗ್ ಸ್ಥಗಿತಗೊಳಿಸಲಾಗಿತ್ತು. ಸ್ಥಗಿತಗೊಳಿಸಲಾಗಿದ್ದ ಸಂದರ್ಭದಲ್ಲಿ ಕೂಡ ಟ್ರಕ್ಕಿಂಗ್ ಸ್ಥಗಿತ ಆಗಿರುವುದು ತಿಳಿಯದೆ ಕೆಲವರು ರಾಣಿಪುರಂಗೆ ಭೇಟಿ ನೀಡಿ ಟ್ರಕ್ಕಿಂಗ್ ಮಾಡಲಾಗದೆ ಹಿಂತಿರುಗಿದ್ದರು. ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಸೇರಿದಂತೆ ವಿವಿಧ ಭಾಗಗಳಿಂದ ಭಾರೀ ಸಂಖ್ಯೆಯಲ್ಲಿ ಮಳೆಗಾಲದ ಪ್ರಕೃತಿಯ ಸೊಬಗನ್ನು ಸವಿಯಲು ರಾಣಿಪುರಂ ಕೇಂದ್ರಕ್ಕೆ ಆಗಮಿಸುತ್ತಿದ್ದಾರೆ.
ಮಳೆಗಾಲ ಅರಂಭಾದ ಬಳಿಕ ರಜಾ ದಿನಗಳಲ್ಲಿ ಹೆಚ್ಚು ಮಂದಿ ಆಗಮಿಸುತ್ತಿದ್ದಾರೆ. ಜುಲೈ 2 ರಂದು 3200 ಕ್ಕೂ ಹೆಚ್ಚು ಮಂದಿ ರಾಣಿಪುರಂ ಗಿರಿಶೃಂಗಕ್ಕೆ ಭೇಟಿ ನೀಡಿದ್ದರು.