ಸುಳ್ಯ:ಮಾನ್ಸೂನ್ನ ಸೊಬಗು, ಪ್ರಕೃತಿಯ ಸೌಂದರ್ಯ ಸವಿಯಲು ಕೇರಳದ ಊಟಿ ಎಂದೇ ಪ್ರಸಿದ್ದಿ ಪಡೆದಿರುವ ‘ರಾಣಿಪುರಂ’ ಗಿರಿಧಾಮಕ್ಕೆ ಆಗಮಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತಿದೆ. ರಜಾ ದಿನವಾದ ಭಾನುವಾರ ಒಂದೇ ದಿನ 1689 ಮಂದಿ ‘ರಾಣಿಪುರಂ’ ಗಿರಿಧಾಮಕ್ಕೆ ಭೇಟಿ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಷ್ಟು ಮಂದಿ ಆಗಮಿಸುವುದು
ದಾಖಲೆಯಾಗಿದೆ. ರಜಾ ದಿನವಾದ ಭಾನುವಾರ ಮಾನ್ಸೂನ್ನಲ್ಲಿ ಹಸಿರು ಹೊದ್ದು ಮಲಗಿರುವ ರಾಣಿಪುರಂನ ಸೌಂದರ್ಯವನ್ನು ಸವಿಯಲು ಕೇರಳ ಹಾಗೂ ಕರ್ನಾಟಕದ ವಿವಿಧ ಭಾಗಗಳಿಂದ ಜನರು ಹರಿದು ಬಂದರು. ಇತ್ತೀಚಿನ ದಿನಗಳಲ್ಲಿ ಹಸಿರು ಹೊದ್ದು ಮನ ಸೆಳೆಯುವ ಪರಿಸರವನ್ನು ಕಣ್ತುಂಬಿಕೊಳ್ಳಲು, ಇಡೀ ಪರಿಸರವನ್ನು ತಬ್ಬಿಕೊಂಡಿರುವ ಮಂಜಿನ ಮತ್ತು ಮಳೆಯ ಕಣಗಳ ಸೊಬಗನ್ನು ಆಸ್ವಾದಿಸಲು ಪ್ರವಾಸಿಗರ ದಂಡೇ ಇಲ್ಲಿಗೆ ಆಗಮಿಸುತ್ತಿದ್ದಾರೆ. ಮಾನ್ಸೂನ್ ಆರಂಭವಾದೊಡನೆ ಮಾನ್ಸೂನ್ ವೈಭವ, ಪ್ರಕೃತಿಯ ಸೊಬಗನ್ನು ಆಸ್ವಾದಿಸಲು
ಪ್ರವಾಸಿಗರ,ಪ್ರಕೃತಿ ಪ್ರಿಯರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಕರ್ನಾಟಕದ ವಿವಿಧ ಭಾಗಗಳಿಂದ ಮತ್ತು ಕೇರಳದಿಂದ ರಾಣಿಪುರಂಗೆ ನೂರಾರು ಮಂದಿ ಪ್ರಕೃತಿಯ ಸೌಂದರ್ಯವನ್ನು ಅರಸಿ ದಿನಾಲು ಬರುತ್ತಿದ್ದಾರೆ. ಟ್ರಕ್ಕಿಂಗ್ಗೆ, ಪ್ರಕೃತಿಯ, ಮಳೆಯ ಸೌಂದರ್ಯ ಆಸ್ವಾದಿಸಲು, ಪ್ರಕೃತಿಯ ಅಧ್ಯಯನಕ್ಕೆ ಹೀಗೆ ಇಲ್ಲಿಗೆ ಆಗಮಿಸುವವರ ಸಂಖ್ಯೆ ನೂರಾರು. ಬೆಳಿಗ್ಗಿನಿಂದಲೇ ರಾಣಿಪುರಂಗೆ ಪ್ರವಾಸಿಗರು ಬರುತ್ತಾರೆ. ಮಳೆಗಾಲ ಇನ್ನಷ್ಟು ಬಲಗೊಳ್ಳುತ್ತಿದ್ದಂತೆ ಮಾನ್ಸೂನ್ ಆಸ್ವಾದಕರು ಇನ್ನಷ್ಟು ಮಂದಿ ಆಗಮಿಸುವ ನಿರೀಕ್ಷೆ ಇದೆ.