ಸುಳ್ಯ:ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ವೀರ ರಾಣಿ ಅಬ್ಬಕ್ಕ ಅವರ 500ನೇ ಜಯಂತ್ಯೋತ್ಸವದ ಅಂಗವಾಗಿ ಹಮ್ಮಿಕೊಂಡ ರಾಣಿ ಅಬ್ಬಕ್ಕ ರಥಯಾತ್ರೆಗೆ ಸುಳ್ಯದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ಇದರ ಅಂಗವಾಗಿ ಗಾಂಧಿನಗರದಿಂದ ಜ್ಯೋತಿ ವೃತ್ತದ ತನಕ ಸುಳ್ಯ ನಗರದಲ್ಲಿ ಬೃಹತ್
ಪಂಜಿನ ಮೆರವಣಿಗೆ ನಡೆಯಿತು. ಸುಳ್ಯ ಗಾಂಧಿನಗರದದಿಂದ ಆರಂಭಗೊಂಡ ಪಂಜಿನ ಮೆರವಣಿಗೆಯಲ್ಲಿ ಪ್ರಮುಖರು ಹಾಗೂ ನೂರಾರು ಮಂದಿ ಎಬಿವಿಪಿ ಕಾರ್ಯಕರ್ತರು ಭಾಗವಹಿಸಿದ್ದರು.ಬಳಿಕ ಜ್ಯೋತಿ ವೃತ್ತದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಎಬಿವಿಪಿ ಮಂಗಳೂರು ವಿಭಾಗ ಪ್ರಮುಖ್ ಕೇಶವ ಬಂಗೇರ’ ಮಾತನಾಡಿ 500 ವರ್ಷದ ಹಿಂದೆ ಪರಕೀಯರ ವಿರುದ್ಧ ಹೋರಾಟ ಮಾಡಿದ ವೀರ ವನಿತೆ ರಾಣಿ ಅಬ್ಬಕ್ಕ ಅವರ ವೀರ ಚರಿತ್ರೆ ಎಲ್ಲರಿಗೂ ಪರಿಚಯವಾಗಬೇಕು.

ಪರಕೀಯರ ಹುಟ್ಟಡಗಿಸಿದ ರಾಣಿ ಅಬ್ಬಕ ಅವರ ಬದುಕು ಮತ್ತು ವೀರ ಚರಿತ್ರೆ ವರ್ತಮಾನದಲ್ಲಿ ಯುವ ಜನಾಂಗಕ್ಕೆ ಪ್ರೇರಣೆಯಾಗಬೇಕು ಎಂಬ ಹಿನ್ನಲೆಯಲ್ಲಿ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ರಾಜ್ಯದಲ್ಲಿ ಎರಡು ರಥಯಾತ್ರೆ ಪ್ರಯಾಣ ನಡೆಸುತ್ತಿದ್ದು ಬೆಂಗಳೂರಿನಿಂದ ಹೊರಟ ರಥಯಾತ್ರೆ ಮೈಸೂರು, ಕೊಡಗು, ಸುಳ್ಯದ ಮೂಲಕ ಮಂಗಳೂರಿಗೆ ಆಗಮಿಸಲಿದೆ ಎಂದರು.

ಎಬಿವಿಪಿ ಪ್ರಾಂತ ಕಾರ್ಯದರ್ಶಿ ಪ್ರವೀಣ್ ಹೆಚ್.ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಎಬಿವಿಪಿ ಪುತ್ತೂರು ಜಿಲ್ಲಾ ಸಂಚಾಲಕ ಸಮನ್ವಿತ್,
ವಿಭಾಗ ಖೇಲೋ ಭಾರತ್ ಸಂಯೋಜಕ ನಂದನ್, ಸುಳ್ಯ ನಗರ ಸಂಯೋಜಕ ಕುಲ್ದೀಪ್ ಪೆಲ್ತಡ್ಕ,ಮೈಸೂರು ಮಹಾ ನಗರ ಸಂಘಟನಾ ಕಾರ್ಯದರ್ಶಿ ಮಂದಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಸಕಿ ಭಾಗೀರಥಿ ಮುರುಳ್ಯ, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಬೆಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಸೇರಿದಂತೆ ಸಂಘ ಪರಿವಾರ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.






