ಸುಳ್ಯ:ಸುಳ್ಯ ರಂಗಮಯೂರಿ ಕಲಾ ಶಾಲೆಯ ವತಿಯಿಂದ ನಡೆದ ರಾಜ್ಯ ಮಟ್ಟದ ಮಕ್ಕಳ ಬಣ್ಣ ಬೇಸಿಗೆ ಶಿಬಿರ 2023 ಸಮಾರೋಪಗೊಂಡಿತು. ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಭವನದಲ್ಲಿ ನಡೆದ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಮಡಿಕೇರಿ ಆಕಾಶವಾಣಿಯ ಮುಖ್ಯ ಉದ್ಘೋಷಕ ಸುಬ್ರಾಯ ಸಂಪಾಜೆ ಮಾತನಾಡಿ’ ಸುಳ್ಯದ ರಂಗಮಯೂರಿ ಕಲಾ ಶಾಲೆಯಿಂದ ಕಲಾ ಕ್ಷೇತ್ರಕ್ಕೆ
ಪುನಶ್ಚೇತನ ದೊರಕಿದೆ. ಮಕ್ಕಳು ತಮ್ಮ ಅಭಿರುಚಿಗೆ ಅನುಸಾರವಾಗಿಮುಂದುವರಿಯುವಂತಾಗಬೇಕು. ವೃತ್ತಿಯೊಂದಿಗೆ ಕಲೆಯನ್ನು ಪ್ರವೃತ್ತಿಯಾಗಿ ಬಳಸಿಕೊಂಡು ಸಾಧಕರಾಗುವಂತಾಲಿ ಎಂದು ಹೇಳಿದರು. ಮಂಗಳೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರಶ್ಮಿ ನೆಕ್ರಾಜೆ, ನಿವೃತ್ತ ಮುಖ್ಯ ಶಿಕ್ಷಕ ಅಚ್ಚುತ ಅಟ್ಲೂರು, ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉಮೇಶ್ ಪಿ.ಕೆ, ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕಾರ್ಯದರ್ಶಿ ಡಾ.ಐಶ್ವರ್ಯ ಕೆ.ಸಿ, ಸಂಪನ್ಮೂಲ ವ್ಯಕ್ತಿ ಎ.ಟಿ.ಕುಸುಮಾಧರ ಮೈಸೂರು ಸಿಗ್ನೇಚರ್ ಡ್ಯಾನ್ಸ್ ಕಂಪೆನಿ ಅಧ್ಯಕ್ಷ ವಿನೋದ್ ಕರ್ಕೇರ ಅತಿಥಿಯಾಗಿದ್ದರು. ರಂಗಮಯೂರಿ ಕಲಾ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ಉಪಸ್ಥಿತರಿದ್ದರು.
ಕಲಾ ಶಾಲೆಯ ಸೀನಿಯರ್ ವಿದ್ಯಾರ್ಥಿಗಳು ಶಿಬಿರ ಗೀತೆ ಹಾಡಿದರು.ಕು. ಸಿಂಚನ ಪುತ್ತಿಲ ಸ್ವಾಗತಿಸಿದರು.ಅನುಶ್ರೀ ಕೇಕಡ್ಕ ವಂದಿಸಿದರು. ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದರು.