ಸುಳ್ಯ: ರಂಗಮಯೂರಿ ಕಲಾಶಾಲೆಯಲ್ಲಿ ಸ್ವಾತಂತ್ರ್ಯ ಸಂಭ್ರಮ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಖ್ಯಾತ ರಂಗಕರ್ಮಿ ಬಾಸುಮ ಕೊಡಗು ಅವರ “ನಡುರಾತ್ರಿಯ ಸ್ವಾತಂತ್ರ್ಯ” ಕವನ ಸಂಕಲನವನ್ನು ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು ಬಿಡುಗಡೆಗೊಳಿಸಿದರು. ಗಾಂಧಿ ಚಿಂತನ ವೇದಿಕೆಯ
ಪ್ರಧಾನ ಸಂಚಾಲಕ ಹರೀಶ್ ಬಂಟ್ವಾಳ್ ಗಾಂಧಿ ಕುರಿತು ಮಾತನಾಡಿದರು.ರಂಗಮಯೂರಿ ಕಲಾ ಶಾಲೆಯ ಪೋಷಕ ಭವಾನಿಶಂಕರ ಅಡ್ತಲೆ, ರಂಗಮಯೂರಿಯ ಸುಗಮ ಸಂಗೀತ ಶಿಕ್ಷಕಿ ಸುಮನ ರಾವ್, ರಂಗಮಯೂರಿ ಕಲಾ ಶಾಲೆಯ ಸಂಚಾಲಕ ಲೋಕೇಶ್ ಊರುಬೈಲು ಮಾತನಾಡಿದರು. ಮುದ್ದುಕೃಷ್ಣ ವೇಷ ಸ್ಪರ್ಧೆಯಲ್ಲಿ ಬಹುಮಾನ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಯಶ್ವಿತ್ ಕಾಳಮ್ಮನೆ ಸ್ವಾಗತಿಸಿ, ಜಯಕೃಷ್ಣ ವಂದಿಸಿದರು.
ಶಶಿಕಾಂತ್ ಮಿತ್ತೂರು ಮತ್ತು ದೃತಿ ದೀಟಿಗೆ ಕಾರ್ಯಕ್ರಮ ನಿರ್ವಹಿಸಿದರು.





