ಸುಳ್ಯ:ಎಲಿಮಲೆಯ ರಂಜನಿ ಸಂಗೀತ ಸಭಾದ ಆಶ್ರಯದಲ್ಲಿ ಚೊಕ್ಕಾಡಿ ಶ್ರೀರಾಮ ಸೇವಾ ಸಮಿತಿ ಚೊಕ್ಕಾಡಿ ಸಹಯೋಗದಲ್ಲಿ ಅ.29 ರಂದು ಸಂಜೆ 5.30ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಛೇರಿ ‘ನವರಾತ್ರಿ ವೈಭವಂ’ ಚೊಕ್ಕಾಡಿಯ
ಶ್ರೀರಾಮ ದೇವಾಲಯದ ದೇಸೀಭವನದಲ್ಲಿ ನಡೆಯಲಿದೆ. ವಿದುಷಿ ಉಷಾ ರಾಮಕೃಷ್ಣ ಭಟ್ ಬೆಂಗಳೂರು ಅವರು ಹಾಡುಗಾರಿಕೆ ಪ್ರಸ್ತುತ ಪಡಿಸಲಿದ್ದಾರೆ. ವಯಲಿನ್ನಲ್ಲಿ ವಿದ್ವಾನ್ ಗಣರಾಜ ಕಾರ್ಲೆ ಕಾಸರಗೋಡು, ಮೃದಂಗದಲ್ಲಿ ವಿದ್ವಾನ್ ಸುನಾದಕೃಷ್ಣ ಅಮೈ ಮಂಗಳೂರು, ಘಟಂನಲ್ಲಿ ವಿದ್ವಾನ್ ಶರತ್ ಕೌಶಿಕ್ ಮೈಸೂರು ಸಹಕರಿಸಲಿದ್ದಾರೆ ಎಂದು ರಂಜನಿ ಸಂಗೀತ ಸಭಾದ ನಿರ್ದೇಶಕ ಸತ್ಯನಾರಾಯಣ ಭಟ್ ಹೊನ್ನಾಡಿ ತಿಳಿಸಿದ್ದಾರೆ.