ಸುಳ್ಯ:ಅಯೋಧ್ಯೆಯಲ್ಲಿ ಶ್ರೀರಾಮ ದೇವಾಲಯದ ಲೋಕಾರ್ಪಣೆ ಹಾಗೂ ಶ್ರೀರಾಮನ ವಿಗ್ರಹದ ಪ್ರಾಣ ಪ್ರತಿಷ್ಠೆಯ ಅಂಗವಾಗಿ ಸುಳ್ಯ ತಾಲೂಕಿನಾದ್ಯಂತ ವಿವಿಧ ಕಾರ್ಯಕ್ರಮಗಳು ನಡೆಯಿತು. ಸುಳ್ಯ ತಾಲೂಕು ಬ್ರಾಹ್ಮಣ ಸಂಘದ ವತಿಯಿಂದ ಚೆನ್ನಕೇಶವ ದೇವಸ್ಥಾನದಲ್ಲಿ ಶ್ರೀರಾಮ ತಾರಕ ಮಂತ್ರ ಜಪ ಯಜ್ಞ ನಡೆಯಿತು. ಹಲವಾರು ಮಂದಿ
ಪ್ರಮುಖರು, ಭಕ್ತರು ಆಗಮಿಸಿದರು. ಕಾಯರ್ಯತೋಡಿ ಮಹಾ ವಿಷ್ಣು ದೇವಸ್ಥಾನ, ಚೆನ್ನಕೇಶವ ದೇವಸ್ಥಾನ, ಶ್ರೀರಾಮ ಭಜನಾ ಮಂದಿರ, ಶಾಂತಿನಗರ, ಬೆಟ್ಟಂಪಾಡಿ, ಜಯನಗರ, ಹಳೇಗೇಟು, ಕೊರಂಬಡ್ಕ, ಕೊಡಿಯಾಲಬೈಲು, ನಾವೂರು ಮತ್ತಿತರ ಕಡೆಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಿತು.

ವಿಶೇಷ ಪ್ರಾರ್ಥನೆ, ಭಜನೆ, ಶ್ರೀರಾಮ ತಾರಕ ಮಂತ್ರ ಜಪ ಯಜ್ಞ, ಶ್ರೀರಾಮ ನಾಮ ಸಂಕೀರ್ತನೆ, ಹೋಮಗಳು ನಡೆಯಿತು. ಅಯೋಧ್ಯೆಯಲ್ಲಿ ನಡೆದ ಕಾರ್ಯಕ್ರಮಗಳ ನೇರ ವೀಕ್ಷಣೆಯ ವ್ಯವಸ್ಥೆ ಮಾಡಲಾಗಿತ್ತು.ಅಡ್ಕಾರು, ಸಂಪಾಜೆ, ಸಂಪಾಜೆ, ಸುಬ್ರಹ್ಮಣ್ಯ ಸೇರಿದಂತೆ ಸುಳ್ಯ ತಾಲೂಕಿನ ನೂರಕ್ಕೂ ಅಧಿಕ ಕಡೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಾಡಿನಾದ್ಯಂತ ಅಯೋಧ್ಯೆ ಪ್ರಾಣ ಪ್ರತಿಷ್ಠೆಯ ಹಿನ್ನಲೆಯಲ್ಲಿ ರಾಮ ಭಕ್ತರು ಪಟಾಕಿ ಸಿಡಿಸಿ, ಸಿಹಿ ತಿಂಡಿ ವಿತರಿಸಿ ಸಂಭ್ರಮಿಸಿದರು.












