ಸುಳ್ಯ:ಶ್ರೀ ರಾಮಚಂದ್ರನ ಜೀವನದ ಅದರ್ಶ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಾರ್ಥಕ ಬದುಕು ಕಾಣಲು ಸಾಧ್ಯ ಎಂದು ಗ್ರೀನ್ ಹೀರೋ ಆಪ್ ಇಂಡಿಯಾ ಡಾ.ಆರ್.ಕೆ.ನಾಯರ್
ಹೇಳಿದ್ದಾರೆ. ಸುಳ್ಯ ಶ್ರೀ ರಾಮ ಮಂದಿರದ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ
ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಸುಳ್ಯ
ಶ್ರೀರಾಮ ಮಂದಿರದ ಬ್ರಹ್ಮಕಲಶೋತ್ಸವದಿಂದ ಅಧ್ಬುತವಾದ ಪರಿವರ್ತನೆ ಸಾಧ್ಯವಿದೆ ಎಂದು ಅವರು ಹೇಳಿದರು.
ಸಮಾರೋಪ ಭಾಷಣ ಮಾಡಿದ ಮಾಜಿ ಸಚಿವ ಎಸ್.ಅಂಗಾರ ಮಾತನಾಡಿ ಶ್ರೀ ರಾಮ ದೇವರ ಅನುಗ್ರಹದಿಂದ ಇಂತಹ ಅದ್ಭುತ ಕಾರ್ಯ ನಡೆಯಲು ಸಾಧ್ಯವಾಗಿದೆ.ಶ್ರೀಮಂತಿಕೆಯಿಂದ ಮಾತ್ರ ಸಂಸ್ಕಾರ ಸಿಗಲಾರದು. ನಂಬಿಕೆಯ ಭಕ್ತಿ ಮಾರ್ಗದ ಮೂಲಕ ಸುಸಂಸ್ಕೃತ ಜೀವನ ನಡೆಸಲು ಸಾಧ್ಯವಿದೆ ಎಂದು ಹೇಳಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣ ಕಾಮತ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್, ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ರಾಜ್ಯಾಧ್ಯಕ್ಷ ಬಾಲಕೃಷ್ಣ ಪುತ್ಯ, ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಕೆ.ಉಪೇಂದ್ರ ಪ್ರಭು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ನಾರಾಯಣ ಕೇಕಡ್ಕ, ಉಪಾಧ್ಯಕ್ಷ ಜಯಪ್ರಕಾಶ್ ರೈ ,ಧರ್ಮದರ್ಶಿ ಮಂಡಳಿಯ ಸದಸ್ಯರಾದ ಅಶೋಕ ಪ್ರಭು ಶ್ರೀನಿವಾಸ ಎನ್, ಸಂದೇಶ್ ಕುರುಂಜಿ, ಮಹಾಬಲ ಕೇರ್ಪಳ, ಗೋಪಾಲ ಎಸ್.ನಡುಬೈಲು, ಭಾಸ್ಕರ ನಾಯರ್ ಅರಂಬೂರು, ಪುರುಷೋತ್ತಮ ಎಂ.ಎಸ್, ಪ್ರದೀಪ್ ಪ್ರಭು, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಕೇರ್ಪಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಚಾಲಕ ಅವಿನ್ ಬೆಟ್ಟಂಪಾಡಿ ಪ್ರಾರ್ಥಿಸಿದರು. ಗೋಪಾಲ ಎಸ್.ನಡುಬೈಲು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ನಾರಾಯಣ ಕೇಕಡ್ಕ ರವರು ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಆರ್ಥಿಕ ಸಮಿತಿ ಸಂಚಾಲಕ ಅಶೋಕ ಪ್ರಭು ವಂದಿಸಿದರು. ಬೂಡು ರಾಧಾಕೃಷ್ಣ ರೈ ಮತ್ತು ಮನೋಜ್ ಕೇರ್ಪಳ ಕಾರ್ಯಕ್ರಮ ನಿರೂಪಿಸಿದರು.