ಸುಳ್ಯ:ಸುಳ್ಯ ಶ್ರೀರಾಮ ಪೇಟೆಯ ಶ್ರೀರಾಮ ಮಂದಿರದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂಭ್ರಮ. ಬ್ರಹ್ಮಶ್ರಿ ವೇದಮೂರ್ತಿ ಮಧೂರು ರಾಜೇಶ ಸರಳಾಯ ಅವರ ನೇತೃತ್ವದಲ್ಲಿ ಶ್ರೀ ಮಹಾಗಣಪತಿ, ಶ್ರೀ ಮೂಕಾಂಬಿಕಾ, ಶ್ರೀ ಸೀತಾ ಲಕ್ಷ್ಮಣ ಆಂಜನೇಯ ಸಮೇತ ಶ್ರೀರಾಮ ದೇವರ ಪುನರ್ ಪ್ರತಿಷ್ಠೆ ನಡೆಯಿತು. ಬೆಳಗ್ಗೆ

ಕವಾಟೋದ್ಘಾಟನೆಯಾಗಿ ಗಣಪತಿ ಹವನ, ಅಷ್ಟೋತ್ತರ ಶತಕಲಶ ಪ್ರತಿಷ್ಠೆ, ನವಕ ಪ್ರತಿಷ್ಠೆಯ ಬಳಿಕ ಶ್ರೀ ದೇವರ ಪ್ರತಿಷ್ಠೆ ನಡೆದು ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಿತು. ಮಂತ್ರಾವಾಹನೆ, ನವಕಾಭಿಷೇಕ,ಕಲಶಾಭಿಷೇಕ, ಮಹಾಪೂಜೆ, ನಿತ್ಯ ನೈಮಿತ್ತಿಕ ಪ್ರಾರ್ಥನೆ, ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಿತು.
ನೂರಾರು ಮಂದಿ ಭಕ್ತರು ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಸಾಕ್ಷಿಯಾದರು. ಬ್ರಹ್ಮಕಲಶೋತ್ಸವ ಸಮಿತಿ, ಧರ್ಮದರ್ಶಿ ಮಂಡಳಿ, ಶ್ರೀರಾಮ ಸಾಂಸ್ಕೃತಿಕ ಸಂಘದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.















