ಸುಳ್ಯ:ಸುಳ್ಯ ಶ್ರೀರಾಮ ಪೇಟೆಯ ಶ್ರೀರಾಮ ಮಂದಿರದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂಭ್ರಮಕ್ಕೆ ಚಾಲನೆ ನೀಡಲಾಗಿದೆ.
ಬ್ರಹ್ಮಕಲಶೋತ್ಸವಕ್ಕೆ ಹಸಿರುವಾಣಿ ಸಮರ್ಪಣೆ ಜ.25ರಂದು ನಡೆಯಿತು. ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಿಂದ ಶ್ರೀರಾಮ ಮಂದಿರದವರೆಗೆ ವೈಭವದ ಹಸಿರುವಾಣಿ ಮೆರವಣಿಗೆ ನಡೆಯಿತು. ಚೆಂಡೆ ವಾದ್ಯ, ಮೇಳಗಳು, ಪೂರ್ಣ ಕುಂಭ ಮೆರವಣಿಗೆಗೆ ಮೆರುಗು ನೀಡಿತು. ಹಸಿರುವಾಣಿ ಹೊತ್ತ

ಹತ್ತಾರು ವಾಹನಗಳು, ನೂರಾರು ಮಂದಿ ಭಕ್ತರು ಮೆರವಣಿಗೆಯಲ್ಲಿ ಸಾಗಿ ಬಂದು ರಾಮ ಮಂದಿರಕ್ಕೆ ಹಸಿರುವಾಣಿ ಸಮರ್ಪಿಸಲಾಯಿತು. ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಕೃಷ್ಣ ಕಾಮತ್ ತೆಂಗಿನ ಕಾಯಿ ಒಡೆಯುವ ಮೂಲಕ ಹಸಿರುವಾಣಿ ಮೆರವಣಿಗೆಗೆ ಚಾಲನೆ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾರಾಯಣ ಕೇಕಡ್ಕ ಸ್ವಾಗತಿಸಿದರು.

ಪ್ರಮುಖರಾದ ಕೆ.ಗೋಕುಲ್ದಾಸ್, ವಿನಯಕುಮಾರ್ ಕಂದಡ್ಕ, ಎಂ.ವೆಂಕಪ್ಪ ಗೌಡ, ಪ್ರಭಾಕರನ್ ನಾಯರ್.ಕೆ, ಬೂಡು ರಾಧಾಕೃಷ್ಣ ರೈ, ರಾಜು ಪಂಡಿತ್, ಗಿರೀಶ್ ಕುಂಠಿನಿ, ಗಿರೀಶ್ ಕಲ್ಲುಗದ್ದೆ, ಶೀನಪ್ಪ ಬಯಂಬು, ಕಿರಣ್ ಕುರುಂಜಿ, ಕುಸುಮಾಧರ ರೈ ಬೂಡು, ದೇವಿಪ್ರಸಾದ್ ಅತ್ಯಾಡಿ, ಸೋಮಶೇಖರ ಪೈಕ, ಮಹೇಶ್ ಮೇರ್ಕಜೆ, ಶಶಿಕಲಾ ನೀರಬಿದಿರೆ, ಶಿಲ್ಪಾ ಸುದೇವ್, ಶೀಲಾ ಅರುಣ ಕುರುಂಜಿ, ಕಿಶೋರಿ ಶೇಠ್, ಅಶೋಕ್ ಅಡ್ಕಾರ್, ಜಗದೀಶ್, ನವೀನ್ ಕುದ್ಪಾಜೆ, ರಮಾನಂದ ರೈ, ಜಗದೀಶ್ ಕಾಯರ್ತೋಡಿ, ವರ್ಷಿತ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮೆರವಣಿಗೆ

ರಾಮಮಂದಿರಕ್ಕೆ ಆಗಮಿಸಿ ಹಸಿರುವಾಣಿ ಸಮರ್ಪಿಸಲಾಯಿತು.
ಇಂದಿನಿಂದ 28ರವರೆಗೆ ರಾಮಮಂದಿರದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ಹಾಗೂ ಭಜನೋತ್ಸವ ವಿಜ್ರಂಭಣೆಯಿಂದ ನಡೆಯಲಿದೆ. ಇಂದು ಬೆಳಿಗ್ಗೆ ರಾಮ ಮಂದಿರದಲ್ಲಿ ಗಣಪತಿ ಹವನ ನಡೆದು ಉಗ್ರಾಣ ತುಂಬಿಸಲಾಯಿತು.
ಶ್ರೀರಾಮ ಮಂದಿರದ ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಧರ್ಮದರ್ಶಿ ಮಂಡಳಿ ಪದಾಧಿಕಾರಿಗಳು ಮತ್ತು ಸದಸ್ಯರು, ಶ್ರೀರಾಮ ಸಾಂಸ್ಕೃತಿಕ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.










