ಸುಳ್ಯ: ಸುಳ್ಯ ಕಾಯರ್ತೋಡಿ ವಿಷ್ಣು ನಗರದ ಸೂರ್ತಿಲ ಶ್ರೀ ರಕ್ತೇಶ್ಚರಿ ಕ್ಷೇತ್ರದ ಬ್ರಹ್ಮಕಲಶ ಮತ್ತು ನೇಮೋತ್ಸವ ಮೇ.21 ಮತ್ತು 22 ರಂದು ನಡೆಯಲಿದೆ. ಕಾರಣಿಕ ಸ್ಥಳ ಸೂರ್ತಿಲದಲ್ಲಿ ಶ್ರೀ ರಕ್ತೇಶ್ಚರಿ ಕ್ಷೇತ್ರದ ಜೀರ್ಣೋದ್ಧಾರ ಪೂರ್ಣಗೊಂಡಿದ್ದು ಶ್ರೀ ರಕ್ತೇಶ್ವರಿ, ಗುಳಿಗ ಮತ್ತು ನಾಗದೇವರ ಪ್ರತಿಷ್ಠಾ ಬ್ರಹ್ಮಕಲಶ ಮತ್ತು ನೇಮೊತ್ಸವ ವೇದ ಮೂರ್ತಿ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ವೇದಮೂರ್ತಿ ಕುಂಟಾರು ರವೀಶ್ ತಂತ್ರಿ ನೇತೃತ್ವದಲ್ಲಿ ನಡೆಯಲಿದೆ. ಮೇ.21 ರಂದು
ಪೂ.9.30ಕ್ಕೆ ಶ್ರೀ ಚೆನ್ನಕೇಶವ ದೇವಸ್ಥಾನದ ವಠಾದಿಂದ ಹಸಿರುವಾಣಿ ಮೆರವಣಿಗೆ ನಡೆಯಲಿದೆ. ಸಂಜೆ 3.30ರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.ಶ್ರೀ ರಕೇಶ್ವರಿ ಭಜನಾ ಮಂಡಳಿ ಕಾಯರ್ತೋಡಿ- ಸೂರ್ತಿಲ, ಸುಳ್ಯ ಶ್ರೀ ಮಿತ್ತೂರು ಉಳ್ಳಾಕುಲು ಮಹಿಳಾ ಭಜನಾ ಮಂಡಳಿ, ಅಮೈ ಮಡಿಯಾರು,ದೀಪಾಂಜಲಿ ಮಹಿಳಾ ಮಂಡಳಿ ಶಾಂತಿನಗರ, ಶ್ರೀ ಸದಾಶಿವ ಭಜನಾ ಸಂಘ ಆಲೆಟ್ಟಿ ಶ್ರೀ ಮಹಾವಿಷ್ಣು ಭಜನಾ ಸಂಘ ಕಾಯರ್ತೋಡಿ ಭಜನಾ ಕಾರ್ಯಕ್ರಮ ನಡೆಯಲಿದೆ.
ಸಂಜೆವ 5ಕ್ಕೆ ತಂತ್ರಿಗಳ ಆಗಮನ ಸಂಜೆ 7 ರಿಂದ ಪುಣ್ಯಾವಾಚನ, ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ,ರಾಕ್ಕೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹಾಂತ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ.
ಮೇ.22 ರಂದು ಬೆಳಿಗ್ಗೆ 6ಕ್ಕೆ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, 7.44 ರ ಮಿಥುನ ಲಗ್ನ ಮಿಥುನ ಲಗ್ನದ ಸುಮುಹೂರ್ತದಲ್ಲಿ ಪ್ರತಿಷ್ಠೆ – ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ನಿತ್ಯ ನೈಮಿತ್ಯಾಧಿಗಳ ನಿರ್ಣಯ, ಪ್ರಸಾದ ವಿತರಣೆ ನಡೆಯಲಿದೆ.
ಧಾರ್ಮಿಕ ಸಭೆ:
ಫೂ.11 ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ.ಲೀಲಾಧರ ಡಿ.ವಿ. ಅಧ್ಯಕ್ಷತೆ ವಹಿಸುವರು.
ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ್ ತಂತ್ರಿ ಆಶೀರ್ವಚನ ನೀಡುವರು.ಮುಖ್ಯ ಅಭ್ಯಾಗತರಾಗಿ ಗುಜರಾತಿನ ಉದ್ಯಮಿ ಡಾ ಆರ್. ಕೆ. ನಾಯರ್, ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ
ಕೃಷ್ಣ ಕಾಮತ್ ಅರುಬೂರು ,ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ನಾಗೇಶ್, ನಪಂ.ಸದಸ್ಯೆ ಪ್ರವಿತಾ ಪ್ರಶಾಂತ್ ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ
6.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ,
ತೆಲೆಕೆದ ಬೊಳ್ಳಿ ಡಾ. ದೇವಿದಾಸ್ ಕಾಪಿಕಾಡ್, ಬೋಜರಾಜ್ ವಾಮಂಜೂರ್, ಅರವಿಂದ್ ಬೋಳಾರ್ ನಟಿಸಲಿರುವ ನೂತನ
ಹಾಸ್ಯಮಯ ತುಳು ನಾಟಕ ನಡೆಯಲಿದೆ.
ನೇಮೋತ್ಸವ:
ಸಂಜೆ 6ಕ್ಕೆ ಶ್ರೀ ರಕ್ತೇಶ್ವರಿ ದೈವದ ತೊಡಂಙಲ್,
ರಾತ್ರಿ 9.30 ರಿಂದ
ಶ್ರೀ ರಕ್ತೇಶ್ವರಿ ಹಾಗೂ ಗುಳಿಗ ದೈವದ ನೇಮೋತ್ಸವ ನಡೆಯಲಿದೆ ಎಂದು ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.