ಸುಬ್ರಹ್ಮಣ್ಯ: ಕನ್ನಡ್ ಖ್ಯಾತ ಚಲನಚಿತ್ರ ನಟ ಹಾಗು ನಿರ್ದೇಶಕ ರಕ್ಷಿತ್ ಶೆಟ್ಟಿ ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಕುಟುಂಬ ಸಮೇತರಾಗಿ ಕುಕ್ಕೆಗೆ ಆಗಮಿಸಿದ ಅವರು ದೇವರ ದರುಶನ ಪಡೆದರು. ತಂದೆ ಶ್ರೀಧರ ಶೆಟ್ಟಿ ತಾಯಿ ರಂಗಮ್ಮ ಶೆಟ್ಟಿ ,ಸಹೋದರ ರಂಜಿತ್ ಶೆಟ್ಟಿ ಸೇರಿ ಕುಂಟಂಬ ಸಮೇತರಾಗಿ ಭೇಟಿ ನೀಡಿ ದೇವರ ದರ್ಶನ ಪಡೆದರು. ಚಿತ್ರ ನಟ, ನಿರ್ದೇಶಕ, ನಿರ್ಮಾಪಕರಾಗಿ ಮಿಂಚುತ್ತಿರುವ ರಕ್ಷಿತ್ ಶೆಟ್ಟಿ ನಾಯಕನಾಗಿ ಇತ್ತೀಚೆಗೆ ಹೊರ ಬಂದ ಚಾರ್ಲಿ777 ಚಿತ್ರ ದೊಡ್ಡ ಸದ್ದು ಮಾಡಿತ್ತು.
