ಸುಳ್ಯ: ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮ ಸುಳ್ಯದ ವಿವಿಧ ಕಡೆಗಳಲ್ಲಿ ಆಚರಿಸಲಾಯಿತು . ಗಣೇಶ್ ಪ್ರಿಂಟರ್ಸ್ ಸುಳ್ಯ ,ಭಟ್ ಎಸೋಸಿಯೇಟ್ ಲೆಕ್ಕ ಪರಿಶೋಧಕರ ಕಚೇರಿ, ಸರಕಾರಿ ಆಸ್ಪತ್ರೆ ಮತ್ತು
ಪ್ರೆಸ್ ಕ್ಲಬ್ ಸುಳ್ಯ, ಇಲ್ಲಿ ರಕ್ಷಾ ಬಂಧನ ಆಚರಿಸಿಕೊಳ್ಳಲಾಯಿತು. ರಾಖಿ ಕಟ್ಟಿ ಸಿಹಿ ಹಂಚಲಾಯಿತು. ಸರಕಾರಿ ಆಸ್ಪತ್ರೆ ಯಲ್ಲಿ ಒಳರೋಗಿಗಳಿಗೆ ಹಣ್ಣು ಹಂಪಲು ನೀಡಿ ರಾಖಿ ಕಟ್ಟುವುದರ ಮುಖಾಂತರ ರಕ್ಷಾ ಬಂಧನ ಆಚರಿಸಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷೆ ಪುಷ್ಪ ಮೇದಪ್ಪ, ಕಾರ್ಯದರ್ಶಿ ಲೋಲಾಕ್ಷಿ ದಾಸನ ಕಜೆ ,ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ .ಎ.ಗುಣವತಿ ಕೊಲ್ಲಂತಡ್ಕ ,ಸತ್ಯವತಿ ಬಸವನಪಾದೆ , ಶಶಿಕಲಾ ಹರ ಪ್ರಸಾದ್ ,ವೀಣಾ ಮೋಂಟಡ್ಕ, ಸರಸ್ವತಿ ಕಕ್ಕಾಡು, ಮಮತಾ ಬೊಳುಗಲ್ಲು, ಸುಜಾತಾ ರೈ ರಾಜೀವಿ ಪರ್ಲಿಕಜೆ, ಉಪಸ್ಥಿತರಿದ್ದರು.





