ಸುಳ್ಯ: ಕನ್ನಡಿಗರು ಭಾಷೆಯನ್ನು ಹೆಚ್ಚು ಹೆಚ್ಚು ಬಳಸಿದಷ್ಟು ಭಾಷೆ ಸಶಕ್ತವಾಗುತ್ತದೆ. ನಮ್ಮ ಉಸಿರಿನಷ್ಟೇ ಸಹಜವಾಗಿ ಭಾಷೆಯನ್ನು ಮಾತನಾಡಬೇಕು. ಎಂದು ಸುಳ್ಯ ಎನ್ನೆoಸಿಯ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ ಸಂಜೀವ ಕುದ್ಪಾಜೆ ಅವರು ಹೇಳಿದರು.ಅವರು ಸುಳ್ಯದ ನೆಹರು ಮೆಮೋರಿಯಲ್ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಸಂಯುಕ್ತ
ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ಎನ್ನೆಂಸಿಯ ಪ್ರಾಚಾರ್ಯರ ಪ್ರೊ. ರುದ್ರ ಕುಮಾರ್ ಎಂ ಎಂ ವಹಿಸಿದ್ದರು. ವೇದಿಕೆಯಲ್ಲಿ ಪ.ಪೂ.ವಿಭಾಗದ ಪ್ರಾoಶುಪಾಲೆ ಹರಿಣಿ ಪುತ್ತೂರಾಯ, ಪಿಯು ವಿಭಾಗದ ವಿದ್ಯಾರ್ಥಿ ಕ್ಷೇಮಾಧಿಕಾರಿ ಸಾವಿತ್ರಿ ಕೆ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ನಿಶ್ವಿತ ಮತ್ತು ತಂಡದವರು ಕನ್ನಡ ಗೀತೆ ಹಾಡಿದರು.ಹಿಂದಿ ಉಪನ್ಯಾಸಕಿ ರಾಜೇಶ್ವರಿ.ಎ.ಸ್ವಾಗತಿಸಿ,ಕನ್ನಡ ಉಪನ್ಯಾಸಕಿ,ಕಾರ್ಯಕ್ರಮ ಸಂಯೋಜಕಿ ಬೇಬಿ ವಿದ್ಯಾ ಪಿ.ಬಿ. ಕಾರ್ಯಕ್ರಮ ನಿರೂಪಿಸಿದರು.ವಿದ್ಯಾರ್ಥಿ ಕ್ಷೇಮಾಧಿಕಾರಿ ಸಾವಿತ್ರಿ ಕೆ ವಂದಿಸಿದರು.ಬೋಧಕ ಬೋಧಕೇತರ ವೃಂದದವರು , ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.