ಸುಳ್ಯ:ಕರ್ನಾಟಕ ನೇತಾಜಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸುಳ್ಯದ ಚಿತ್ರ ಕಲಾವಿದೆ ಪೂಜಾ ಬೋರ್ಕರ್ ಬೆಟ್ಟಂಪಾಡಿ ಅವರಿಗೆ ಲಭಿಸಿದೆ. ಬೆಂಗಳೂರಿನ
ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.ವಿವಿಧ ಸಾಂಸ್ಕೃತಿಕ ಮತ್ತು ಕಲಾ ಕ್ಷೇತ್ರದಲ್ಲಿ ಹಾಗೂ ಕನ್ನಡ ನಾಡು ನುಡಿ ಸಂಬಂಧಿಸಿದ ವಿವಿಧ ಕ್ಷೇತ್ರದ ಸಾಧಕರನ್ನ ಗುರುತಿಸಿ ಗೌರವಿಸಲಾಯಿತು.ಪೆನ್ಸಿಲ್ ಆರ್ಟ್, ವಾಲ್ ಆರ್ಟ್, ಕ್ಯಾನ್ವಾಸ್ ಆರ್ಟ್ , ಆರ್ಕಲಿಕ್ ಆರ್ಟ್, ಬಾಟಲ್ ಆರ್ಟ್, ರಂಗೋಲಿ ಆರ್ಟ್ ಹಾಗೂ ವಿವಿಧ ಪ್ರಕಾರದ ಮುಖವಾಡ ತಯಾರಿಕೆಯನ್ನು ಮಾಡುವ ಪೂಜಾ ಬೆಟ್ಟಂಪಾಡಿ ನಿವಾಸಿ. ಹೇಮಲತಾ ಮತ್ತು ರಮೇಶ್ ನಾಯಕ್ ದಂಪತಿಗಳ ಪುತ್ರಿ.