ಸುಳ್ಯ: ಕೇಂದ್ರ ಮತ್ತು ರಾಜ್ಯ ಸರಕಾರದ ನೆರವಿನೊಂದಿಗೆ ಜಲಾನಯನ ಅಭಿವೃದ್ದಿ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಅಟಲ್ ಇನ್ಕ್ಯೂಬೇಷನ್ ಸೆಂಟರ್ ನಿಟ್ಟೆ ಇವರುಗಳ ಸಹಕಾರದಲ್ಲಿ ಕಳೆದ ವರ್ಷ ಸುಳ್ಯದಲ್ಲಿ ಆರಂಭಗೊಂಡ ಸುಳ್ಯ ರೈತ ಉತ್ಪಾದಕ ಸಂಸ್ಥೆಯ ಬೆಳ್ಳಾರೆ ಶಾಖೆ ಬೆಳ್ಳಾರೆ ಮಾಸ್ತಿಕಟ್ಟೆ ಶ್ರೀಕೃಷ್ಣ ಆರ್ಕೇಡ್ನಲ್ಲಿ ಆರಂಭಗೊಂಡಿತು.
ಕ್ಯಾಂಪ್ಕೋ ಸಂಸ್ಥೆಯ ನೀರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲ ದೀಪ


ಬೆಳಗಿಸಿ ಕಚೇರಿಯನ್ನು ಉದ್ಘಾಟಿಸಿದರು. ಕ್ಯಾಂಪ್ಕೋ ಸಂಸ್ಥೆಯಿಂದ ರೈತ ಉತ್ಪಾದಕ ಸಂಸ್ಥೆ ವ್ಯವಹಾರಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಅವರು ತಿಳಿಸಿದರು.
ಪುತ್ತೂರು ಉಪಕೃಷಿ ನಿರ್ದೇಶಕ ಶಿವಶಂಕರ್ ಹೆಚ್ ದಾನೆಗೊಂಡರ್ ರಸಗೊಬ್ಬರ ಮಳಿಗೆ ಉದ್ಘಾಟಿಸಿದರು, ಮುಖ್ಯ ಅಥಿತಿಯಾಗಿ ತೋಟಗಾರಿಕೆಯ ಇಲಾಖೆಯ ಉಪನಿರ್ದೇಶಕ ಯೋಗೀಶ್ ಹೆಚ್.ಆರ್,ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ, ಕೊಡಿಯಾಲ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರದೀಪ್ ರೈ ಅಜಿರಂಗಳ, ಕಳಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಕುಮಾರ ಕೆ, ಪೆರುವಾಜೆ ಗ್ರಾ. ಪಂ ಅಧ್ಯಕ್ಷ ಜಗನ್ನಾಥ ಪೂಜಾರಿ , ಐವರ್ನಾಡು ಗ್ರಾ. ಪಂ ಅಧ್ಯಕ್ಷ ಬಾಲಕೃಷ್ನ ಕಿಲಾಡಿ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದರು. ಸಹಾಯಕ ಕೃಷಿ ನಿರ್ದೇಶಕ ನಾಗರಾಜ್, ಸಹಾಯಕ ತೋಟಗಾರಿಕಾ ಅಧಿಕಾರಿ ಅರಬಣ್ಣ ಪೂಜೇರಿ ಉಪಸ್ಥಿತರಿದ್ದರು.ಕಟ್ಟಡದ ಮಾಲೀಕರಾದ ಎಸ್.ಪಿ ಮುರಳೀಧರ ಹಾಗೂ ರಸಗೊಬ್ಬರ ಮಳಿಗೆ ಕಟ್ಟಡ ಮಾಲಿಕರಾದ ಶಶಿಧರ ಬಿ.ಕೆ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ವಹಿಸಿದರು,ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ರವರು ಸ್ವಾಗತಿಸಿ, ಸಂಸ್ಥೆಯ ನಿರ್ದೇಶಕರಾದ ಅಮೃತ್ ಕುಮರ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಾಖಾ ವ್ಯವಸ್ಥಾಪಕ ಕೀರ್ತನ್ ವಂದಿಸಿದರು. ಸಂಸ್ಥೆಯ ನಿರ್ದೇಶಕಿ ಮಧುರಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ರಾಮಕೃಷ್ಣ ಬೆಳ್ಳಾರೆ,ಸುರೇಶ್ ರೈ ಅಗಲ್ಪಾಡಿ, ಲೋಹಿತ್ ಪಿ.ಎನ್, ಶ್ರೀಶಕುಮಾರ್ ಮಾಯಿಪಡ್ಕ, ಸತ್ಯಪ್ರಸಾದ್, ವಿಜಯಕುಮರ್ ಎಂ.ಡಿ, ದೇವರಾಜ್ ಆಳ್ವ, ನೂಜಾಲು ಪದ್ಮನಾಭಗೌಡ, ನೇತ್ರಕುಮಾರ್ ಕನಕಮಜಲು ಉಪಸ್ಥಿತರಿದ್ದರು.