ಪೆರಾಜೆ: ಕರ್ನಾಟಕ ರಾಜ್ಯ ರೈತ ಸಂಘ ಗ್ರಾಮ ಘಟಕ ಪೆರಾಜೆ, ಮಡಿಕೇರಿ ಆಶ್ರಯದಲ್ಲಿ ರೈತ ಸಮಾವೇಶ ಅ.9ರಂದು ಪೆರಾಜೆಯ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ನಡೆಯಲಿದೆ.ಈ ಸಂದರ್ಭದಲ್ಲಿ ಅಡಿಕೆ ಹಳದಿ ರೋಗದ ಬಗ್ಗೆ ವಿಚಾರ ವಿನಿಮಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ವಿಟ್ಲದ ಸಿ.ಪಿ.ಸಿ.ಆರ್.ಐ. ವಿಜ್ಞಾನಿಯಾಗಿರುವ ಡಾ. ಭವಿಷ್ಯ ಅವರು ‘ಅಡಿಕೆ ಹಳದಿ ಎಲೆ ರೋಗ
ಮತ್ತು ಪೋಷಕಾಂಶಗಳ ನಿರ್ವಹಣೆ’ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ನಂತರ ನಡೆಯಲಿರುವ ರೈತರೊಂದಿಗಿನ ಸಂವಾದವನ್ನು ರೈತ ಸಂಘದ ಉಪಾಧ್ಯಕ್ಷರ ಗೋಪಾಲ ಪೆರಾಜೆಯವರು ನಿರ್ವಹಿಸಲಿದ್ದಾರೆ. ಇದರೊಂದಿಗೆ ಸರಕಾರದ ಗಮನ ಸೆಳೆಯುವ ದೃಷ್ಟಿಯಲ್ಲಿ ಹಾನಿಗೊಳಪಟ್ಟಿರುವ ತೋಟಗಳ ರೈತರಿಂದ ನಿರ್ದಿಷ್ಟವಾದ ಅಂಕಿ ಅಂಶಗಳ ಕ್ರೂಡೀಕರಣದ ದಾಖಲೆ ಕಾರ್ಯಕ್ರಮವು ನಡೆಯಲಿದ್ದು ಪೂರಕವಾಗಿ ರೈತರಿಗೆ ಸ್ವಯಂಘೋಷಿತ ಅರ್ಜಿ ವಿತರಣೆ ನಡೆಯಲಿದೆ. ಈ ಕುರಿತು ಚರ್ಚಿಸಲು ನಡೆದ ರೈತ ಸಂಘದ ಸಭೆಯಲ್ಲಿ ಸಂಘದ ಅಧ್ಯಕ್ಷ ಎನ್ ಪಿ ಬಾಲಕೃಷ್ಣ ನಿಡ್ಯಮಲೆ, ಗೌರವ ಅಧ್ಯಕ್ಷ ಹರಿಶ್ಚಂದ್ರ ಮುಡ್ಕಜೆ, ಕಾರ್ಯದರ್ಶಿ ಪುರುಷೋತ್ತಮ ಬಂಗಾರ ಕೋಡಿ, ಜೊತೆ ಕಾರ್ಯದರ್ಶಿ ಅಶೋಕ ಪೀಚೆ, ಖಜಾಂಜಿ ನೆಕ್ಕಿಲ ಗಂಗಾಧರ, ಸಂಘದ ಉಪಾಧ್ಯಕ್ಷ ವೇಣುಗೋಪಾಲ ಕುಂದಲ್ಪಾಡಿ, ಸಂಚಾಲಕ ಕೆ.ಸಿ.ಉಮೇಶ ಕುಂಬಳಕೇರಿ, ಸದಸ್ಯರಾದ ವೇದವ್ಯಾಸ ಪೆರಾಜೆ, ನಂದಕುಮಾರ ಕುತ್ತಿಮುಂಡ ಇನ್ನಿತರರು ಉಪಸ್ಥಿತರಿದ್ದರು.