ಸುಳ್ಯ: ಸುಳ್ಯ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆ, ಕಾಸರಗೋಡು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಭರ್ಜರಿ ಮಳೆ ಸುರಿದಿದೆ. ಕಳೆದ 24 ಗಂಟೆಯಲ್ಲಿ ಸುಳ್ಯ ನಗರದಲ್ಲಿ 152 ಮಿ.ಮಿ. ಮಳೆಯಾಗಿದೆ. ಬಹುತೇಕ ಕಡೆಗಳಲ್ಲಿ ಸೆ.ಮಿ.ನಲ್ಲಿ ಶತಕ ದಾಖಲಿಸಿದೆ. ಸುಳ್ಯ ತಾಲೂಕಿನ ಬೆಳ್ಳಾರೆ ಕಾವಿನಮೂಲೆ 125 ಮಿ.ಮೀ, ಕಲ್ಮಡ್ಕ ಗ್ರಾಮ ಕಾಚಿಲ 140 ಮಿ.ಮಿ,ದೊಡ್ಡತೋಟದ
ಬಳಿ ಕೀಲಾರ್ ಕಜೆಯಲ್ಲಿ 178 ಮಿ.ಮೀ,ಮುರುಳ್ಯ ಗ್ರಾಮದ ಶೇರದಲ್ಲಿ 125 ಮಿ.ಮಿ,ಉಬರಡ್ಕದಲ್ಲಿ 160 ಮಿ.ಮಿ, ಕೇನ್ಯ116ಮಿ.ಮೀ, ಎಣ್ಮೂರು, ಗುಂಡಿಮಜಲು, 137 ಮಿ ಮೀ, ಕಲ್ಲಾಜೆ 120 ಮಿ.ಮಿ., ವಾಲ್ತಾಜೆ ಕಂದ್ರಪಾಡಿ 132 ಮಿ,ಮಿ, ಗುತ್ತಿಗಾರು ಮೆಟ್ಟಿನಡ್ಕ 142, ಬಾಳಿಲ 136 ಮಿ ಮೀ, ಮರ್ಕಂಜ ಮಾಪಲತೋಟದಲ್ಲಿ 139 ಮಿ.ಮಿ.ಎಡಮಂಗಲ ಗ್ರಾಮದ ದೇವರಮಜಲು 141,
ಅಯ್ಯನಕಟ್ಟೆಯಲ್ಲಿ 141 ಮಿ.ಮಿ., ನಡುಗಲ್ಲು 123, ಬಳ್ಪ 110 ಮಿ.ಮಿ. ಬಳ್ಪ ಪಟೋಳಿಯಲ್ಲಿ 103 ಮಿ ಮೀ, ಸುಬ್ರಹ್ಮಣ್ಯ 96 ಮಿ.ಮಿ.
ಕಟ್ಟ ಗೋವಿಂದ ನಗರದಲ್ಲಿ 82.5 ಮಿ ಮೀ,ಕಡಬ ತಾಲೂಕು ಕೋಡಿಂಬಳ ಗ್ರಾಮದ ತೆಕ್ಕಡ್ಕದಲ್ಲಿ 108ಮಿಮೀ ಮಳೆ, ನೆಲ್ಯಾಡಿ 204 ಮಿ.ಮಿ,ರಾಮಕುಂಜ ಗ್ರಾಮದ ಗೋಳಿತ್ತಡಿಯಲ್ಲಿ 143 ಮಳೆಯಾಗಿದೆ. ಇನ್ನುಳಿದಂತೆ ಕಜೆ ಮಂಚಿ 160ಮಿ.ಮಿ. ಕುಂಬಳೆ — ಎಡನಾಡು 130 ಮಿ. ಮೀ. ಬೆಳ್ತಂಗಡಿ ತಾಲೂಕಿನ ಅಲ್ಲಾಟ ಬಡಾವಣೆಯಲ್ಲಿ 146 ಮಿ.ಮೀ, ಬಂಗಾರಡ್ಕ (ಪುತ್ತೂರು ) 135 ಮಿ.ಮಿ ಸರ್ವೆ 164 ಮಿ.ಮಿ. ಕಂಪದಕೋಡಿ 113 ಮಿ.ಮಿ. ಪಾಣಾಜೆ 190 ಮಿ.ಮಿ. ಹಳೆನೇರಂಕಿ 150ಮಿಮಿ ಕೈರಂಗಳದಲ್ಲಿ 166 ಮಿಮೀ ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಕೈಲಾರಿನಲ್ಲಿ 107 ಮಿಮೀ, ಕೆಲಿಂಜೆ 181 ಮಿ.ಮಿ. ಮಿತ್ತೂರಿನ ಐಸಿರಿ ಪರಿಸರದಲ್ಲಿ 201 ಮಿ.ಮಿ. ಮಳೆಯಾಗಿರುವ ಮಾಹಿತಿಯಿದೆ.