ಸುಳ್ಯ: ಸುಳ್ಯ ನಗರದಲ್ಲಿ ಶುಕ್ರವಾರ ಮಧ್ಯಾಹ್ನದ ಬಳಿಕ ಸಾಧಾರಣ ಮಳೆಯಾಗಿದೆ. ಮಧ್ಯಾಹ್ನ 3.30 ರ ಬಳಿಕ ಮಳೆ ಸುರಿದಿಸೆ. ನಗರದ ವಿವಿಧ ಕಡೆಗಳಲ್ಲಿ ಸಾಮಾನ್ಯ ಮಳೆಯಾಗಿದೆ. ಸುಳ್ಯ ಹಾಗೂ ಕಡಬ ತಾಲೂಕಿನ ವಿವಿಧ ಕಡೆ ಮಳೆಯಾಗಿದೆ. ಕೆಲವೆಡೆ ಸಾಮಾನ್ಯ
ಮಳೆಯಾದರೆ ಕೆಲವು ಕಡೆ ಹನಿ ಮಳೆಯಾಗಿದೆ. ಮುರುಳ್ಯ ಗ್ರಾಮದ ಶೇರ, ಬಾಳಿಲ, ಎಣ್ಮೂರು ಮತ್ತಿತರ ಕಡೆಗಳಲ್ಲಿ ಮಳೆಯಾಗಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಲೆಯಾಗಿರುವ ಬಗ್ಗೆ ವರಸಿಯಾಗಿದೆ.
ಮುಂಗಾರು ಕೇರಳಕ್ಕೆ ಜೂ.8 ರಂದು ಪ್ರವೇಶ ಪಡೆದಿದ್ದು ವಿವಿಧ ಕಡೆ ಮಳೆ ಸುರಿದಿದೆ. ಒಂದೆರಡು ದಿನದಲ್ಲಿ ಕರ್ನಾಟಕಕ್ಕೆ ಮುಂಗಾರು ಪ್ರವೇಶ ಪಡೆಯುವ ಸಾಧ್ಯತೆ ಇದೆ. ಒಂದು ವಾರದಲ್ಲಿ ಮುಂಗಾರು ಮಳೆ ಬಿರುಸಾಗುವ ಸಾಧ್ಯತೆ ಇದೆ