ಸುಳ್ಯ:ಸುಳ್ಯ ನಗರದ ಕುರುಂಜಿಭಾಗ್ನ ಕೆವಿಜಿ ಕ್ಯಾಂಪಸ್ ಬಳಿಯಲ್ಲಿ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಸರಿಯಾಗಿಲ್ಲದೆ ರಸ್ತೆಯು ಹೊಳೆಯಂತಾಗಿ ವಿದ್ಯಾರ್ಥಿಗಳು, ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಚರಂಡಿಗಳು ಇಲ್ಲದೆ ಇಲ್ಲಿ ಮಳೆಯ ನೀರು
ರಸ್ತೆಯಲ್ಲಿಯೇ ಧುಮುಕಿ ಹರಿಯುತಿದೆ. ಭಾರೀ ಪ್ರಮಾಣದಲ್ಲಿ ಕೆಸರು ನೀರು ತುಂಬಿ ನಡೆದಾಡಲು ಸಾಧ್ಯವಾಗದೆ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತೊಂದರೆ ಆಗಿದೆ.ಇದೇ ಭಾಗದಲ್ಲಿ ನಗರ ಪಂಚಾಯತ್ ವತಿಯಿಂದ ಇತ್ತೀಚೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದ್ದರೂ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಸಾವಿರಾರು ಮಂದಿ ವಿದ್ಯಾರ್ಥಿಗಳು, ಸಾರ್ವಜನಿಕರು ನಡೆದಾಡುವ ರಸ್ತೆಯ ಚರಂಡಿ ವ್ಯವಸ್ಥೆ ಕಲ್ಪಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.