


ಸುಳ್ಯ: ಅಬ್ಬರಿಸಿದ ಗುಡುಗು ಸಿಡಿಲಿನೊಂದಿಗೆ ಸುಳ್ಯದಲ್ಲಿ ಭರ್ಜರಿ ಮಳೆ ಸುರಿಯಿತು. ನ.6ರಂದು ರಾತ್ರಿ 8 ಗಂಟೆಯ ಹೊತ್ತಿಗೆ ಆರಂಭವಾದ ಮಳೆ ಅರ್ಧ ಗಂಟೆಗೂ ಹೆಚ್ಚು ಸಮಯ ಸುರಿಯಿತು. ಬಳಿಕ ರಾತ್ರಿ ಪೂರ್ತಿ ಮಳೆ ಮುಂದುವರಿಯಿತು. ತಾಲೂಕಿನ ವಿವಿಧ ಭಾಗಗಳಲ್ಲಿ ಗುಡುಗು, ಸಿಡಿಲಿನ ಅಬ್ಬರದೊಂದಿಗೆ ಮಳೆಯಾಗಿದೆ. ಗಾಳಿಯೂ ಬೀಸಿದೆ. ಬೆಳ್ಳಾರೆ, ಕಾವಿನಮೂಲೆ, ಬಳ್ಪ, ಕೋಟೆ ಮುಂಡುಗಾರು, ಎಣ್ಮೂರು, ಗುತ್ತಿಗಾರು, ಬಾಳಿಲ, ಬಳ್ಪ, ದೊಡ್ಡ ತೋಟ, ಕರಿಕ್ಕಳ, ಸಂಪಾಜೆ ಸೇರಿದಂತೆ ವಿವಿಧ ಭಾಗಗಳಲ್ಲಿ ಮಳೆಯಾಗಿದೆ. ಗುಡುಗು ಸಿಡಿಲಿನ ಅಬ್ಬರದೊಂದಿಗೆ ಮಳೆ ಆರಂಭವಾಗುತ್ತಿದ್ದಂತೆ ಹಲವೆಡೆ ವಿದ್ಯುತ್ ಕಡಿತವಾಗಿದೆ. ದಕ್ಷಿಣ ಜಿಲ್ಲೆಯಲ್ಲಿಯೂ ಕೆಲವು ಭಾಗಗಳಲ್ಲಿ ಸಂಜೆ ಮಳೆಯಾದ ಬಗ್ಗೆ ವರದಿಯಾಗಿದೆ. ನ.2 ರಿಂದ ರಾಜ್ಯದಾದ್ಯಂತ ಮಳೆ ಆರಂಭವಾಗಿದ್ದು ಒಂದೆರಡು ದಿನ ಮಳೆ ಮುಂದುವರಿಯುವ ಸಾಧ್ಯತೆ ಇದೆ ಇದೆ.
1 comment
ಶಿವಪ್ಪ