ಮಡಿಕೇರಿ: ಕೊಡಗಿನಲ್ಲಿ ಕೆಲವೆಡೆ ಮಾ.14 ರಂದು ಮಳೆ ಸುರಿದಿದೆ. ಕೊಡಗು ಜಿಲ್ಲೆಯ ನಾಪೋಕ್ಲು ಸುತ್ತಮುತ್ತಲು ಮತ್ತಿತರ ಕಡೆಗಳಲ್ಲಿ ಇಂದು ಮಳೆಯಾಗಿದೆ. ಕೊಡಗಿನ ವಿವಿಧ ಭಾಗಗಳಲ್ಲಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಇದರಿಂದ ಬಿಸಿಲಿನಿಂದ ಕಾದ ಇಳೆಗೆ ತಂಪೆರೆದಿದೆ. ಉರಿ ಬಿಸಿಲಿನ
ತಾಪದಿಂದ ಬಸವಳಿದ ಜನತೆಗೂ ಮಳೆ ಖುಷಿ ಕೊಟ್ಟಿದೆ. ರಾಜ್ಯದಲ್ಲಿ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ಇತ್ತು. ತಾಪಮಾನ ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಂದಿನ ಕೆಲವು ದಿನ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ.ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಯುಗಾದಿಗೂ ಮೊದಲೇ ಮಳೆಯಾಗುವ ಸೂಚನೆ ಎಂದು ಹೇಳಲಾಗಿದೆ.