ಸುಳ್ಯ: ಮುಂಗಾರು ಮಾರುತ ಆಗಮಿಸಿ ವಾರ ಆದರೂ ನಿರೀಕ್ಷಿತ ಬಿರುಸು ಪಡೆದುಕೊಂಡಿಲ್ಲ. ವಿವಿಧ ಕಡೆ ಸಾಮಾನ್ಯ ಮಳೆ, ಹನಿ ಮಳೆಯಷ್ಟೇ ಬರುತಿದೆ. ಜೂನ್ ತಿಂಗಳು ಅರ್ಧ ಆದರೂ ಜೂನ್ ತಿಂಗಳ ಸರಾಸರಿ ಮಳೆಯ ಶೇ.10 ರಷ್ಟು ಕೂಡ ಸುರಿದಿಲ್ಲ.ಕಳೆದ 24 ಗಂಟೆಯಲ್ಲಿ ಸುಳ್ಯ, ಕಡಬ ತಾಲೂಕು ಸೇರಿದಂತೆ ವಿವಿಧ ಕಡೆ
ಸಾಮಾನ್ಯ ಮಳೆಯಾಗಿದೆ.
ಕೊಲ್ಲಮೊಗ್ರು ಕಟ್ಟ ಗೋವಿಂದ ನಗರದಲ್ಲಿ 17.7 ಮಿ ಮೀ ಬೆಳ್ಳಾರೆ ಕಾವಿನಮೂಲೆ 10 ಮಿ.ಮೀ,ಕಡಬ ತಾಲೂಕು ಕೋಡಿಂಬಳ ಗ್ರಾಮದ ತೆಕ್ಕಡ್ಕದಲ್ಲಿ 19ಮಿಮೀ, ಸುಳ್ಯ ನಗರ 11 ಮಿ. ಮೀ. ಮಳೆ ಸುರಿದಿದೆ.
ಗುತ್ತಿಗಾರು ಮೆಟ್ಟಿನಡ್ಕ 27 ಮಿ.ಮಿ, ಬಾಳಿಲ 9 ಮಿ.ಮಿ.
ಕೇನ್ಯ 17ಮಿ.ಮೀ. ಚೊಕ್ಕಾಡಿ 25.4ಮಿ ಮೀ ಮುರುಳ್ಯ ಗ್ರಾಮದ ಶೇರದಲ್ಲಿ 17 ಮಿ.ಮಿ.ಮಳೆ. ಎಡಮಂಗಲ ಗ್ರಾಮದ ದೇವರಮಜಲಿನಲ್ಲಿ 8 ಮಿ.ಮಿ. ಮಳೆ, ಮರ್ಕಂಜದ ಮಾಪಲತೋಟದಲ್ಲಿ 26 ಮಿ.ಮಿ. ಮಳೆ ಬಂದಿದೆ. ದೊಡ್ಡತೋಟದ ಬಳಿ ಕಿಲಾರ್ಕಜೆಯಲ್ಲಿ
52 ಮಿ. ಮೀ.ಮಳೆ, ಗುತ್ತಿಗಾರು ಕಮಿಲ 36 ಮಿಮೀ, ಬಳ್ಪ 42 ಮಿ.ಮೀ.ಎಣ್ಮೂರು, ಗುಂಡಿಮಜಲು10 ಮಿ ಮೀ
ಕರಿಕಳ 21ಮಿಮಿ ಮಳೆಯಾಗಿದೆ. ಕಲ್ಮಡ್ಕ ತೊಟ್ಟೆತ್ತೋಡಿಯ 15 ಮಿಮೀ. ಕಲ್ಲಾಜೆ 22 ಮಿ.ಮಿ.ಮಳೆ ಬಂದಿದೆ. ನಡುಗಲ್ಲು 32 ಮಿ.ಮಿ. ಮಡಪ್ಪಾಡಿ 35 ಮಿ.ಮಿ.ಮಳೆಯಾಗಿದೆ.
ವಿವಿಧ ಜಿಲ್ಲೆಗಳಲ್ಲಿ ಜೂನ್ 19ರವರೆಗೂ ಮಳೆ:
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ಜೂನ್ 19ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.