ಸುಳ್ಯ:ನಿನ್ನೆ ಬೀಸಿದ ಬಿರುಗಾಳಿಗೆ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ವ್ಯಾಪಕ ಹಾನಿ ಸಂಭವಿಸಿದೆ. ಬೀಸಿದ ಗಾಳಿಗೆ ವಿವಿಧ ಕಡೆಗಳಲ್ಲಿ ಕೃಷಿ ಹಾನಿ ಸಂಭವಿಸಿದೆ, ತಾಲೂಕಿನ ವಿವಿಧ ಭಾಗಗಳಲ್ಲಿ ವಿದ್ಯುತ್ ಕಂಬಗಳು ಧರಾಶಾಯಿಯಾಗಿದೆ. ಆರಂಬೂರು ಮಧುವನದ ಆಡಿಕೆ ತೋಟದಲ್ಲಿ ಹಲವಾರು ಆಡಿಕೆ ಮರಗಳು ಮುರಿದು ಬಿದ್ದು
ಅಪಾರ ನಷ್ಟ ಸಂಭವಿಸಿದೆ ಎಂದು ಪದ್ಮನಾಭನ್ ನಾಯರ್ ಮಧುವನ ತಿಳಿಸಿದ್ದಾರೆ. ವಿವಿಧ ಕಡೆ ಅಡಿಕೆ, ತೆಂಗು, ಬಾಳೆ ಕೃಷಿಗಳು ಗಾಳಿಗೆ ನಾಶವಾಗಿದೆ. ಮರಗಳು ಮುರಿದು ಬಿದ್ದು ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ, ರಸ್ತೆ ತಡೆ ಉಂಟಾಗಿದೆ. ಕೆಲವೆಡೆ ಮನೆ ಛಾವಣಿಯ ಶೀಟ್ಗಳು ಹಾರಿ ಹೋಗಿದೆ. ಗಾಳಿಗೆ 60ಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ

ಹಾನಿಯಾಗಿದ್ದು ವಿದ್ಯುತ್ ಸರಬರಾಜು ಜಾಲ ಅಸ್ತವ್ಯಸ್ತಗೊಂಡಿದೆ. 40 ಎಲ್ಟಿ ಹಾಗೂ 20 ಹೆಚ್ಟಿ ಕಂಬಗಳು ಮುರಿದಿದೆ. ಇದರಿಂದ ಗ್ರಾಮೀಣ ಹಾಗೂ ನಗರ ಸೇರಿ ವಿದ್ಯುತ್ ಕಡಿತ ಉಂಟಾಗಿದೆ. ನಗರದ ಕೆಲವು ಭಾಗಗಳಲ್ಲಿ ರಾತ್ರಿ ವಿದ್ಯುತ್ ಸರಬರಾಜು ಪುನರಾರಂಭಗೊಂಡಿದೆ. ಆದರೆ ಬಹುತೇಕ ಕಡೆ ವಿದ್ಯುತ್ ಸಂಪರ್ಕ ಸರಿಪಡಿಸಿಲ್ಲ.
