ಚೆನ್ನೈ: ತಮಿಳುನಾಡಿನ ತಿರುವಳ್ಳುವರ್ ಜಿಲ್ಲೆಯ ಕವರೈಪಟ್ಟೆ ರೈಲುನಿಲ್ದಾಣದ ಬಳಿ ಗುಮ್ಮುಡಿಪೂಂಡಿಯಲ್ಲಿ ಶುಕ್ರವಾರ ರಾತ್ರಿ ಗೂಡ್ಸ್ ರೈಲೊಂದಕ್ಕೆ ಮೈಸೂರು–ದರ್ಭಾಂಗ ಬಾಗ್ಮತಿ ಎಕ್ಸ್ಪ್ರೆಸ್ ಡಿಕ್ಕಿ ಹೊಡೆದಿದೆ.ಪರಿಣಾಮ 13 ಬೋಗಿಗಳು ಹಳಿತಪ್ಪಿ ಕನಿಷ್ಠ 19 ಮಂದಿ ಗಾಯಗೊಂಡಿದ್ದಾರೆ.ರಾತ್ರಿ ಸುಮಾರು
8.28ರ ವೇಳೆಗೆ ಘಟನೆ ನಡೆದಿದೆ.13 ಬೋಗಿಗಳು ಹಳಿ ತಪ್ಪಿದೆ. ತಮಿಳುನಾಡು ಸರ್ಕಾರದ ಮೂಲಗಳ ಪ್ರಕಾರ 19 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಚೆನ್ನೈನ ಸ್ಟಾನ್ಲಿ ಮೆಡಿಕಲ್ ಕಾಲೇಜು, ಪೊನ್ನೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ವರದಿಯಾಗಿದೆ.ದಕ್ಷಿಣ ರೈಲ್ವೆಯ ಹಿರಿಯ ಅಧಿಕಾರಿಗಳು ಗುಮ್ಮುಡಿಪೂಂಡಿಗೆ ಭೇಟಿ ನೀಡಿದ್ದಾರೆ.ಅಪಘಾತದಿಂದಾಗಿ ವಿಭಾಗದಲ್ಲಿ ರೈಲು ಸೇವೆಗಳಲ್ಲಿ ಏರುಪೇರಾಗಿದೆ. ಹಲವು ರೈಲುಗಳ ಮಾರ್ಗ ಬದಲಿಸಲಾಗಿದೆ. ಮೈಸೂರು-ದರ್ಭಾಂಗ ಎಕ್ಸ್ಪ್ರೆಸ್ನ ಎಲ್ಲಾ ಪ್ರಯಾಣಿಕರನ್ನು ಇಎಂಯು (ಇ.ವಿ ಕೋಚ್) ಮೂಲಕ ಚೆನ್ನೈ ಸೆಂಟ್ರಲ್ ನಿಲ್ದಾಣಕ್ಕೆ ಕರೆ ತಂದು ಅವರ ಸ್ಥಳಗಳಿಗೆ ಕರೆದೊಯ್ಯಲು ಚೆನ್ನೈನಲ್ಲಿ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ ಎಂದು ದಕ್ಷಿಣ ರೈಲ್ವೆ ಹೇಳಿದೆ.









