ಕೊಲಂಬೊ:ಏಷ್ಯಾಕಪ್ ಕ್ರಿಕೆಟ್ ಸೂಪರ್ 4 ಪಂದ್ಯದಲ್ಲಿ ಅದ್ಭುತ ಜತೆಯಾಟ ನಡೆಸಿದ ವಿರಾಟ್ ಕೊಹ್ಲಿ ಮತ್ತು ಕೆ.ಎಲ್.ರಾಹುಲ್ ಬರ್ಜರಿ ಶತಕ ಸಿಡಿಸಿದರು. ಆ ಮೂಲಕ 50 ಓವರ್ಗಳಲ್ಲಿ ಭಾರತ ಎರಡು ವಿಕೆಟ್ ನಷ್ಟಕ್ಕೆ 356 ರನ್ ದಾಖಲಿಸಿತು.ಭಾನುವಾರ ಸಂಜೆ ಮಳೆ ಸುರಿಯುವ
ಮುನ್ನ ಭಾರತದ ಆರಂಭಿಕ ಬ್ಯಾಟರ್ಗಳಾದ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಅವರ ಜೊತೆಯಾಟದ ಬಳಿಕ ಮಳೆಯ ಕಾರಣ ಪಂದ್ಯವನ್ನು ಸೋಮವಾರಕ್ಕೆ ನಿಗದಿಪಡಿಸಲಾಗಿತ್ತು.
ಮುಂದುವರಿದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆ.ಎಲ್.ರಾಹುಲ್ ಆಕರ್ಷಕ ರೋಹಿತ್ (56; 49ಎ, 4X6, 6X4) ಹಾಗೂ ಗಿಲ್ (58; 52, 4X10) ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 121 ರನ್ ಸೇರಿಸಿ ಅಮೋಘ ಆರಂಭ ನೀಡಿದರು. ಅಂತಿಮವಾಗಿ
50 ಓವರ್ಗಳಲ್ಲಿ ಭಾರತ 2 ವಿಕೆಟ್ ನಷ್ಟಕ್ಕೆ 356 ರನ್ ದಾಖಲಿಸಿ ಪಾಕಿಸ್ತಾನಕ್ಕೆ 357 ರನ್ಗಳ ಗುರಿ ನೀಡಿದೆ.