ಸುಳ್ಯ: ಸುಳ್ಯ ಶ್ರೀ ಗುರು ರಾಘವೇಂದ್ರ ಮಠದ 6 ನೇ ವರ್ಷದ ಪ್ರತಿಷ್ಠಾ ವಾರ್ಷಿಕ ಮಹೋತ್ಸವವು ಎ.21 ಮತ್ತು 22 ರಂದು ನಡೆಯಲಿದೆ. ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ
ಮಾ.16 ರಂದು ಮಠದ ವಠಾರದಲ್ಲಿ ನೆರವೇರಿತು.
ಬೃಂದಾವನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ.ಎನ್.ಶ್ರೀಕೃಷ್ಣ ಸೋಮಯಾಗಿ ಅವರು ಆಮಂತ್ರಣ ಪತ್ರ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಟ್ರಸ್ಟಿಗಳಾದ ರಾಮ್ ಕುಮಾರ್ ಹೆಬ್ಬಾರ್, ಗಿರೀಶ್ ಕೇಕುಣ್ಣಾಯ, ಗಂಗಾಧರ ಮಟ್ಟಿ,ಮಠದ ಪ್ರಧಾನ ಅರ್ಚಕರಾದ ರವಿ ನಾವಡ ಹಾಗೂ ಟ್ರಸ್ಟಿನ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.









