ಬೆಂಗಳೂರು: ನ್ಯೂಜಿಲೆಂಡ್ನ ಆಲ್ ರೌಂಡರ್ ರಚಿನ್ ರವೀಂದ್ರ ಇತ್ತೀಚಿಗೆ ಬೆಂಗಳೂರಿನಲ್ಲಿ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಆಡಲು ಬಂದ ಸಮಯದಲ್ಲಿ ತನ್ನ ತಾತನ ಮನೆಗೆ ಬಂದು ಅಜ್ಜ ಅಜ್ಜಿ ಭೇಟಿಯಾಗಿದ್ದಾರೆ. ಈ ವೇಳೆ ರಚಿನ್ ಅವರ ಅಜ್ಜಿ ರಚಿನ್ಗೆ ದೃಷ್ಟಿ ತೆಗೆದಿದ್ದಾರೆ.ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ. ನ್ಯೂಜಿಲೆಂಡ್ನ ರಾಜಧಾನಿ ವೆಲ್ಲಿಂಗ್ಟನ್ನಲ್ಲಿ ವಾಸವಿರುವ ರಚಿನ್ ಹಾಗೂ

ಅವರ ಪೋಷಕರು ಅನಿವಾಸಿ ಭಾರತೀಯರು.ರಚಿನ್ ಅವರ ತಂದೆ ರವಿ ಕೃಷ್ಣಮೂರ್ತಿ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಸಿಸ್ಟಂ ಆರ್ಕಿಟೆಕ್ಟ್ ಆಗಿದ್ದರು. ಅವರ ಅಜ್ಜ ಬಾಲಕೃಷ್ಣ ಅಡಿಗ ಅವರು ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಪ್ರಾಚಾರ್ಯರಾಗಿದ್ದರು. ರವಿ ಕೃಷ್ಣಮೂರ್ತಿ ಸ್ಥಳೀಯ ಹಂತದ ಕ್ರಿಕೆಟ್ ಆಡಿ ನಂತರ ನ್ಯೂಜಿಲೆಂಡ್ಗೆ ವಲಸೆ ಹೋಗಿದ್ದರು. ಕೃಷ್ಣಮೂರ್ತಿ ಅವರು ಸಚಿನ್ ಹಾಗೂ ದ್ರಾವಿಡ್ ಅವರ ಅಪ್ಪಟ ಅಭಿಮಾನಿಯಾಗಿದ್ದರು. ಆ ಕಾರಣಕ್ಕಾಗಿಯೇ ಮಗನಿಗೆ ರಚಿನ್ ಎಂದು ಹೆಸರು.
16 ವರ್ಷದವರಾಗಿದ್ದಾಗಲೇ ನ್ಯೂಜಿಲೆಂಡ್ನ 19 ವರ್ಷದೊಳಗಿನವರ ತಂಡದಲ್ಲಿ ಆಡಲು ಆರಂಭಿಸಿದ್ದ ರಚಿನ್ ನಂತರ ಈಗ ಪ್ರತಿ ಹಂತದಲ್ಲೂ ಮಿಂಚುತ್ತಿದ್ದಾರೆ. ಪ್ರಸಕ್ತ ವಿಶ್ವಕಪ್ನಲ್ಲಿ 9 ಪಂದ್ಯಗಳಲ್ಲಿ ಆಡಿರುವ ರಚಿನ್, 565 ರನ್ ಗಳಿಸಿದ್ದಾರೆ. ಆ ಮೂಲಕ ಈ ವಿಶ್ವಕಪ್ನಲ್ಲಿ ಅಧಿಕ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ.









