ಸುಳ್ಯ:ಪ್ರೊ ಮಾದರಿಯ ರಾಷ್ಟ್ರೀಯ ಕಬಡ್ಡಿ ಪಂದ್ಯಾಟದಲ್ಲಿ ಪುರುಷರ ವಿಭಾಗದ ಲೀಗ್ ಪಂದ್ಯಗಳು ಮುಗಿದಿದ್ದು ಅತೀ ಹೆಚ್ಚು ಅಂಕ ಪಡೆದ 8 ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ನಾಲ್ಕು ಪೂಲ್ಗಳಿಂದ ತಲಾ ಎರಡು ತಂಡಗಳು ಕ್ವಾರ್ಟರ್ ಪೈನಲ್ ಪ್ರವೇಶಿಸಿದೆ. ಮೊದಲ ಕ್ವಾರ್ಟರ್ ಫೈನಲ್ನಲ್ಲಿ
ಬ್ಯಾಂಕ್ ಆಫ್ ಬರೋಡ ತಂಡ ಕಡಬ ಫ್ರೆಂಡ್ಸ್ ತಂಡವನ್ನು ಎದುರಿಸಲಿದೆ. ದ್ವಿತೀಯ ಕ್ವಾರ್ಟರ್ ಫೈನಲ್ನಲ್ಲಿ ಪೆರಿಯಾರ್ ಸ್ಪೋರ್ಟ್ಸ್ ತಂಡ ಆಳ್ವಾಸ್ ಮೂಡಬಿದ್ರೆ ತಂಡವನ್ನು ಎದುರಿಸಲಿದೆ. ಮೂರನೇ ಕ್ವಾರ್ಟರ್ ಫೈನಲ್ನಲ್ಲಿ ಏನೆಪೋಯ ಯೂನಿವರ್ಸಿಟಿ ತಂಡ, ದೊರೈಸಿಂಗಂ ತಂಡವನ್ನು ಎದುರಿಸಲಿದೆ. ಕೊನೆಯ ಕ್ವಾರ್ಟರ್ ಫೈನಲ್ನಲ್ಲಿ ವೆಲಾಲಗರ್ ಪಾಂಡಿಚೇರಿ ತಂಡ ಟಿಎಂಸಿ ಥಾಣೆ ತಂಡವನ್ನು ಎದುರಿಸಲಿದೆ.







