ಸುಳ್ಯ:ಸುಳ್ಯನಗರದ ಖಾಸಗಿ ಬಸ್ ನಿಲ್ದಾಣ ಮತ್ತು ಆಟೋ ಪಾರ್ಕಿಂಗ್ ಮಧ್ಯ ನಿಲ್ದಾಣದ ಪ್ರವೇಶ ರಸ್ತೆ ಭಾಗದಲ್ಲಿರುವ ಪ್ರದೇಶವು ತೀರಾ ನಾದುರಸ್ಥಿ ಯಲ್ಲಿರುದನ್ನು ಮನಗಂಡು ನಗರ ಪಂಚಾಯತ್ ವತಿಯಿಂದ ರೂ 5 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ
ಕಾಂಕ್ರೀಟೀಕರಣ ಉದ್ಘಾಟನೆ ಮಾಡಲಾಯಿತು.ನಗರ ಪಂಚಾಯತ್ ಮಾಜಿ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಉದ್ಘಾಟಿಸಿದರು.ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ ಮಾತನಾಡಿದರು.ನಗರ ಪಂಚಾಯತ್ ಮಾಜಿ ಸದಸ್ಯರಾದ ಕೆ.ಎಸ್. ಉಮ್ಮರ್, ಶರೀಫ್ ಕಂಠಿ,ಮಾಜಿ ಉಪಾಧ್ಯಕ್ಷ ಗೋಕುಲ್ ದಾಸ್, ರಶೀದ್ ಜಟ್ಟಿಪ್ಪಳ್ಳ, ಸ್ಥಳೀಯ ಉದ್ಯಮಿ ಗಳಾದ ರಜಾಕ್ ಹಾಜಿ ಶೀತಲ್, ನಾಗೇಶ್, ಹಮೀದ್ ಸಮ್ಮರ್ ಕೂಲ್, ರಿಕ್ಷಾ ಯೂನಿಯನ್ ಅಧ್ಯಕ್ಷ ಪ್ರಕಾಶ್, ಸಂಘಟನಾ ಕಾರ್ಯದರ್ಶಿ ಸುಂದರ್, ಗುರೂಜಿ ಬಸ್ನ ಮಾಲಕ ಮೋಹನ್ ಮೊದಲಾದವರು ಉಪಸ್ಥಿರಿದ್ದರು.ಈ ಸಂದರ್ಭದಲ್ಲಿ ಸ್ಥಳೀಯ ನಗರ ಪಂಚಾಯತ್ ಸದಸ್ಯರಾಗಿ 5 ವರ್ಷ ಸೇವೆ ಸಲ್ಲಿಸಿದ ಕೆ. ಎಸ್. ಉಮ್ಮರ್ ಅವರನ್ನು ಸ್ಥಳೀಯ ನಾಗರಿಕರು, ಉದ್ಯಮಿಗಳು ಆಟೋ ಮಾಲಕರ ಚಾಲಕರ ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು












