ಪುಣ್ಚತ್ತಾರು:ಪುಣ್ಚತ್ತಾರು ವಿಷ್ಣುನಗರದ ಶ್ರೀ ವಿಷ್ಣು ಮೂರ್ತಿ ದೈವಸ್ಥಾನದಲ್ಲಿ ನಡೆದ ವಿಷ್ಣುಮೂರ್ತಿ ಒತ್ತೆಕೋಲದ ಆದಾಯ ಖರ್ಚು ಮಂಡನಾ ಸಭೆ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಆದಾಯ ಖರ್ಚು ವೆಚ್ಚಗಳ

ವಿವರಗಳನ್ನು ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಮೋನಪ್ಪ ಬಂಡಾಜೆ ಸಭೆಯಲ್ಲಿ ಮಂಡಿಸಿದರು.ಒಟ್ಟು 6,66,820 ಆದಾಯ ಬಂದಿದ್ದು 5,38,481 ಖರ್ಚಾಗಿ
1,28,339 ಉಳಿಕೆಯಾಗಿದೆ ಎಂದು ಸಭೆಯಲ್ಲಿ ವಿವರಿಸಲಾಯಿತು.ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತೂರು ಒತ್ತೆಕೋಲದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಸಿದರು.ವೇದಿಕೆಯಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಶೇಷಪ್ಪ ಗೌಡ ಬೆದ್ರಂಗಳ, ಮೊಕ್ತೇಸರರಾದ ವೆಂಕಟರಮಣ ಆಚಾರ್ಯ, ಆಡಳಿತ ಮಂಡಳಿ ಸದಸ್ಯರಾದ ಕುಮಾರ್ ಆಚಾರ್ಯ ದೋಲ್ಪಾಡಿ ಉಪಸ್ಥಿತರಿದ್ದರು. ಡಾ.ದೇವಿಪ್ರಸಾದ್ ಕಾನತ್ತೂರ್ ಸ್ವಾಗತಿಸಿ, ವಂದಿಸಿದರು
















