ಕಾಣಿಯೂರು:ಪುಣ್ಚತ್ತಾರು ಕರಿಮಜಲು ವಿಷ್ಣುಪುರ ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಮತ್ತು ಶ್ರೀ ಕಾಳಿಕಾಂಬಾ ದೇವಿ ದೇವಸ್ಥಾನದಲ್ಲಿ ಎ.2ರಿಂದ 4ರ ತನಕ ಶ್ರೀ ವಿಷ್ಣುಮೂರ್ತಿ ದೈವದ 57ನೇ ವರ್ಷದ ಒತ್ತೆಕೋಲ ನಡೆಯಲಿದೆ.ಎ.2 ರಂದು ಹಸಿರು ಕಾಣಿಕೆಯನ್ನು ವಿವಿಧ ಕಡೆಗಳಿಂದ ಸಂಗ್ರಹಿಸಿ ಮೆರವಣಿಗೆಯ ಮೂಲಕ ಶ್ರೀ ವಿಷ್ಣುಮೂರ್ತಿ ದೈವಸ್ಥಾನಕ್ಕೆ ತರಲಾಗುವುದು ಎ.3ರಂದು ಬೆಳಿಗ್ಗೆ
8ಕ್ಕೆ ಸ್ಥಳ ಶುದ್ದೀಕರಣ, ಮಧ್ಯಾಹ್ನ 1ಕ್ಕೆ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ5.30ಕ್ಕೆ ವಿಷ್ಣುಪುರ ದೈವಸ್ಥಾನದಿಂದ ಭಂಡಾರ ತೆಗೆಯುವುದು.ಸಂಜೆ 6.30ಕ್ಕೆ ಮೇಲೇರಿಗೆ ಅಗ್ನಿ ಸ್ಪರ್ಶ ನಡೆಯಲಿದೆ. ಸಂಜೆ 7ರಿಂದ ಭಜನಾ ಕಾರ್ಯಕ್ರಮ. ರಾತ್ರಿ 8ಕ್ಕೆ ಅನ್ನ ಸಂತರ್ಪಣೆ, ರಾತ್ರಿ 10ರಿಂದ ವಿಷ್ಣುಮೂರ್ತಿ ದೈವದ ಕುಳ್ಚಾಟ ನಡೆಯಲಿದೆ.ರಾತ್ರಿ ಗಂಟೆ 9 ರಿಂದ

ಕು. ವೈಭವಿ ವಾಸು, ಸನಾತನ ನಾಟ್ಯಾಲಯ ಮಂಗಳೂರು ಇವರಿಂದ ಭರತನಾಟ್ಯ ಕಾರ್ಯಕ್ರಮ,ಶುಕ್ರವಾರ ರಾತ್ರಿ 11ರಿಂದ ಶ್ರೀ ಸಾಯಿ ಕಲಾ ಯಕ್ಷ ಬಳಗ ಡಾ. ಶಿವರಾಮ ಕಾರಂತ ಬಾಲವನ ಪುತ್ತೂರು ಯಕ್ಷಗಾನ ತಂಡ ಇವರಿಂದ
ಯಕ್ಷಗಾನ ಬಯಲಾಟ ‘ಶ್ರೀನಿವಾಸ ಕಲ್ಯಾಣ’ ನಡೆಯಲಿದೆ.
ಎ.4ರಂದು ಪ್ರಾತಃಕಾಲ 5ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ, ಬೆಳಿಗ್ಗೆ 7.30ಕ್ಕೆ ಮಾರಿಕಳ, ಬೆಳಿಗ್ಗೆ 8ಕ್ಕೆ ಗುಳಿಗ ದೈವದ ಕೋಲ, ಬಳಿಕ ಪ್ರಸಾದ ವಿತರಣೆ, ಹರಕೆ ಒಪ್ಪಿಸುವುದು ನಡೆಯಲಿದೆ ಎಂದು ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಮತ್ತು ಶ್ರೀ ಕಾಳಿಕಾಂಬ ದೇವಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














