ಕಾಣಿಯೂರು: ಪುಣ್ಚತ್ತಾರು ಕರಿಮಜಲು ವಿಷ್ಣುಪುರ ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಮತ್ತು ಶ್ರೀ ಕಾಳಿಕಾಂಬಾ ದೇವಿ ದೇವಸ್ಥಾನದಲ್ಲಿ ಎ.3,4ರಂದು ನಡೆಯಲಿರುವ ಶ್ರೀ ವಿಷ್ಣುಮೂರ್ತಿ ದೈವದ 55ನೇ ವರ್ಷದ ಒತ್ತೆಕೋಲ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆಯು ಮಾ.1ರಂದು ಕ್ಷೇತ್ರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ
ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್, ಮೊಕ್ತೇಸರರಾದ ವೆಂಕಟ್ರಮಣ ಆಚಾರ್ಯ ವಿಷ್ಣುಪುರ, ಜನಾರ್ದನ ಆಚಾರ್ಯ ವಿಷ್ಣುಪುರ, ಕೃಷ್ಣ ಆಚಾರ್ಯ ವಿಷ್ಣುಪುರ, ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಮೋನಪ್ಪ ಬಂಡಾಜೆ, ಉಪಾಧ್ಯಕ್ಷ ಶೇಷಪ್ಪ ಗೌಡ ಬೆದ್ರಂಗಳ, ಜತೆ ಕಾರ್ಯದರ್ಶಿ ಮಿಥುನ್ ಪೈಕ ಹಾಗೂ ಆಡಳಿತ ಮಂಡಳಿ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.
ಎ.3,4 ಒತ್ತೆಕೋಲ:
ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲಕ್ಕೆ ಕೊಳ್ಳಿ ಕೊಯ್ಯುವ ಕಾರ್ಯಕ್ರಮ ಮಾ.1 ರಂದು ನಡೆಯಿತು.
ಎ.3 ಮತ್ತು 4 ರಂದು ಒತ್ತೆಕೋಲ ನಡೆಯಲಿದೆ.ಎ.3ರಂದು ಸಂಜೆ 5.30ಕ್ಕೆ ವಿಷ್ಣುಪುರ ದೈವಸ್ಥಾನದಿಂದ ಭಂಡಾರ ತೆಗೆಯುವುದು. ಸಂಜೆ

6.30ಕ್ಕೆ ಮೇಲೇರಿಗೆ ಅಗ್ನಿ ಸ್ಪರ್ಶ ನಡೆಯಲಿದೆ. ಸಂಜೆ 7ರಿಂದ ಭಜನಾ ಕಾರ್ಯಕ್ರಮ. ರಾತ್ರಿ 10ರಿಂದ ವಿಷ್ಣುಮೂರ್ತಿ ದೈವದ ಕುಳ್ಚಾಟ ನಡೆಯಲಿದೆ. 10.30ರಿಂದ ತುಳು ಹಾಸ್ಯಮಯ ನಾಟಕ ‘ಅಮ್ಮೆರ್’ ಪ್ರದರ್ಶನಗೊಳ್ಳಲಿದೆ. ಎ.4ರಂದು ಪ್ರಾತಃಕಾಲ 5ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ, ಬೆಳಿಗ್ಗೆ 7.30ಕ್ಕೆ ಮಾರಿಕಳ, ಬೆಳಿಗ್ಗೆ 8ಕ್ಕೆ ಗುಳಿಗ ದೈವದ ಕೋಲ, ಬಳಿಕ ಪ್ರಸಾದ ವಿತರಣೆ, ಹರಕೆ ಒಪ್ಪಿಸುವುದು ನಡೆಯಲಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್ ತಿಳಿಸಿದ್ದಾರೆ.







