ಸುಳ್ಯ: ಸುಳ್ಯ ನಗರ ಪಂಚಾಯತ್‌ನ ನೀರು ಸರಬರಾಜು ಮಾಡುವ ಪಂಪ್ ಹೌಸ್ ಬಳಿಯಲ್ಲಿ ನ.16 ರಂದು ಬೆಳಿಗ್ಗೆ ಕೆಲವೊಂದು ವಿಚಿತ್ರ ವಸ್ತುಗಳು ಪತ್ತೆಯಾಗಿದ್ದು ತೀವ್ರ ಕುತೂಹಲ ಕೆರಳಿಸಿದೆ. ವಾಮಾಚಾರದ ಕುರುಹಿನಂತೆ ಕಂಡು ಬರುವ ಕುಂಕುಮ, ಹರಿಸಿನ ಲೇಪಿತ ಗೆಂಧಾಳೆ

ಬೊಂಡ ಪತೆಯಾಗಿದೆ. ಬೊಂಡದಲ್ಲಿ ಕರಿ ಬೇವಿನ ಸೊಪ್ಪು ಇರಿಸಲಾಗಿತ್ತು. ಬೆಳ್ತಿಗೆ ಅಕ್ಕಿಯ ಮೇಲೆ ಬೊಂಡ ಇರಿಸಲಾಗಿತ್ತು. ಪಯಸ್ವಿನಿ ನದಿ ಬದಿಯಲ್ಲಿರುವ ಕಲ್ಲುಮುಟ್ಲು ಪಂಪ್ ಹೌಸ್‌ನ ಜನರೇಟರ್ ಶೆಡ್ ಕಟ್ಟಡದ ಬಳಿಯಲ್ಲಿ ಇರಿಸಿದ ರೀತಿಯಲ್ಲಿ ಈ ವಸ್ತುಗಳು ಕಂಡು ಬಂದಿದೆ. ಇಂದು ಬೆಳಿಗ್ಗೆ ಪಂಪ್ ಹೌಸ್‌ನ ಸಿಬ್ಬಂದಿಗಳು ಇದನ್ನು ನೋಡಿದಾಗ ಇವರಿಗೆ ತೀವ್ರ ಕುತೂಹಲ ಕೆರಳಿಸಿತ್ತು. ಸಿಬ್ಬಂದಿಗಳು ತಿಳಿಸಿದ ಮೇರೆಗೆ ನಗರ
ಕಲ್ಲುಮುಟ್ಲು ನಗರ ಪಂಚಾಯತ್ ಪಂಪ್ ಹೌಸ್ ಬಳಿಯಲ್ಲಿ ಕುತೂಹಲ ಕೆರಳಿಸಿರುವ ಬೊಂಡ, ಕುಂಕುಮ, ಅಕ್ಕಿ ಕರಿಬೇವು.!
The Sullia Mirror YouTube Channel
ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಬಳಿಕ ಬೊಂಡ ಮತ್ತಿತರ ವಸ್ತುಗಳನ್ನು ತೆರವು ಮಾಡಿದರು. ಯಾರು ಇರಿಸಿದ್ದಾರೆ ಮತ್ತು ಯಾಕೆ ಈ ವಸ್ತುಗಳನ್ನು ಇಲ್ಲಿ ತಂದಿರಿಸಿದ್ದಾರೆ ಎಂಬ ಕುತೂಹಲ ಉಂಟಾಗಿದೆ.