ಸುಳ್ಯ:ಸುಳ್ಯದ ಶ್ರೀ ಶಾರದಾ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.ಕಾಲೇಜಿನ ಪ್ರಾಂಶುಪಾಲೆ ದಯಾಮಣಿ.ಕೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ವಿದ್ಯಾರತ್ನ ಪ್ರಶಸ್ತಿಗೆ ಬಾಜನರಾದ ದಯಾಮಣಿ ಅವರನ್ನು
ಕೇಕ್ ಕತ್ತರಿಸುವುದರ ಮೂಲಕ ಅಭಿನಂದಿಸಿದರು. ಪ್ರಥಮ ಪಿಯುಸಿ ವಿದ್ಯಾರ್ಥಿನಿ ಶ್ರೇಯ ಶುಭ ಹಾರೈಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ತನುಜ್ಞ. ಶ್ರೀವಲ್ಲಿ, ಕಿಶನ್,ಜೋಯ್ ಸ್ಟನ್ ಕ್ರಾಸ್ತ, ಫಾತಿಮತ್ ಸಹಲ ಮತ್ತು ದುರ್ಗಾಶ್ರೀ ಇವರು ತಮ್ಮ ಎರಡು ವರ್ಷದ ವಿದ್ಯಾರ್ಥಿ ಜೀವನದ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಉಪನ್ಯಾಸಕರಾದ ಬಾಲಕೃಷ್ಣ ಕೆ, ಪ್ರಸನ್ನ ಎನ್. ಎಚ್, ದಾಮೋದರ ಎನ್, ದಯಾನಂದ ಓ.ಡಿ ಮತ್ತು ಸ್ವರ್ಣಕಲಾ.ಎ.ಎಸ್ ರವರು ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಪ್ರಥಮ ಪಿಯುಸಿ ವಿದ್ಯಾರ್ಥಿನಿ ಕುಮಾರಿ ಸ್ವಾತಿ ಸ್ವಾಗತಿಸಿ, ಅಶಿಕ ವಂದಿಸಿದರು. ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಆಯುಷತ್ ನಫೀರ ಕಾರ್ಯಕ್ರಮ ನಿರೂಪಿಸಿದರು.










