ಬೆಂಗಳೂರು: 2025-26ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದಾಖಲೆಯ ಫಲಿತಾಂಶ ಲಭಿಸಿದೆ. 600ಕ್ಕೆ 600 ಅಂಕ ಗಳಿಸುವ ಮೂಲಕ ದಿಶಾ, ಆದಿತಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಶೇ.86ರಷ್ಟು ಫಲಿತಾಂಶ ದಾಖಲಾಗಿದ್ದು ಪರೀಕ್ಷೆಗೆ ಹಾಜರಾದ 7.10 ಲಕ್ಷ ವಿದ್ಯಾರ್ಥಿಗಳ ಪೈಕಿ
6 ಲಕ್ಷ 10 ಸಾವಿರ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇನ್ನು 2025ರಲ್ಲಿ 73.45ರಷ್ಟು ಫಲಿತಾಂಶ ದಾಖಲಾಗಿತ್ತು. ಆದರೆ, ಈ ಬಾರಿ 12.50ಕ್ಕಿಂತ ಹೆಚ್ಚಿನ ಫಲಿತಾಂಶ ದಾಖಲಾಗಿದೆ.
ವಾಣಿಜ್ಯ ವಿಭಾಗ (ಅಗ್ರ 3)
ಅದಿತಿ ಎ. ಬಾಪು (ಜೈನ್ ಕಾಲೇಜು, ಬೆಂಗಳೂರು)- 600ಕ್ಕೆ 600
ದಿಶಾ (ಆಳ್ವಾ ಪಿಯು ಕಾಲೇಜು, ಮೂಡಬಿದಿರೆ) – 600ಕ್ಕೆ 600
ಧ್ವನಿ ಕುಲಕರ್ಣಿ (ಗೋಗ್ಟೆ ಪಿಯು ಕಾಲೇಜು, ತಿಲಕವಾಡಿ) – 599
ಕಲಾ ವಿಭಾಗ (ಅಗ್ರ 3)
ಅರ್ಚನಾ ಡಿ.ಎಂ (ಇಂದೂ ಪಿಯು ಕಾಲೇಜು, ಬಳ್ಳಾರಿ)- 598
ಸಂಗೀತಾ (ಇಂದೂ ಪಿಯು ಕಾಲೇಜು, ಬಳ್ಳಾರಿ)- 598
ಸೃಷ್ಟಿ (ಎಸ್ಎಂಟಿ ವಿಜೆ ಕಾಲೇಜು, ಕಲಬುರ್ಗಿ) – 598
ವಿಜ್ಞಾನ ವಿಭಾಗ (ಅಗ್ರ 3)
ಪ್ರಿನ್ಸಿಲ್ಲಾ ಕಾರ್ಡೋಜ (ದಿ ಲರ್ನಿಂಗ್ ಸೆಂಟರ್ ಕಾಲೇಜು, ಮಂಗಳೂರು) – 599
ಅಭಿರಾಮ್ ವಿ.ಭಟ್ (ವಿವೇಕಾನಂದ ಪಿಯು ಕಾಲೇಜು) – 598
ಏಂಜೆಲ್ ತಿವಾರಿ (ಬೇಸ್ ಪಿಯು ಕಾಲೇಜು, ಬೆಂಗಳೂರು) – 598











